ನವದೆಹಲಿ, ನ 29 (DaijiworldNews/AK): ಟೀಂ ಇಂಡಿಯಾದ ಕೋಚ್ ಆಗಿ ಮತ್ತೆ ರಾಹುಲ್ ದ್ರಾವಿಡ್ ಮರು ಆಯ್ಕೆ ಆಗಿದ್ದಾರೆ ಎಂದು ಬಿಸಿಸಿಐ ಹೇಳಿದೆ.
![](https://daijiworld.ap-south-1.linodeobjects.com/Linode/img_tv247/29-11-2023akrahul.jpg)
2021 ರ ನವೆಂಬರ್ ನಲ್ಲಿ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕಗೊಂಡಿದ್ದರು. ಇವರ ಅಧಿಕಾರವಧಿಯಲ್ಲಿ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನ ನೀಡಿತ್ತು. 2023ರ ಟೆಸ್ಟ್ ಚಾಂಪಿಯನ ಫೈ ನಲ್ ಗೆ ಪ್ರವೇಶ ಮಾಡಿ ಟೀಮ್ ಇಂಡಿಯಾ ರನ್ನರ್ ಅಪ್ ಗಳಿಸಿತ್ತು.
ಇದರ ಜೊತೆ ಮೊನ್ನೆ ನಡೆದ ಏಕದಿನ ವಿಶ್ವಕಪ್ ನಲ್ಲೂ ಭಾರತ ಅದ್ಭುತ ಪ್ರದರ್ಶನ ನೀಡಿ, ಫೈನಲ್ನಲ್ಲಿ ಆಸ್ಟ್ರೇ ಲಿಯಾ ವಿರುದ್ಧ ಸೋತು ರನ್ನರ್ ಅಪ್ ಆಗಿತ್ತು.
ಹಾಗಾಗಿ ಅವರನ್ನೇ ಮುಖ್ಯ ಕೋಚ್ ಆಗಿ ಮುಂದಿನ ಎರಡು ವರ್ಷಗಳ ಮುಂದುವರೆಸುವ ಒಲವು ತೋರಿತ್ತು. ಇದೀಗ ಮತ್ತೆ ಬಿಸಿಸಿಐ ಅಧಿಕಾರಿಗಳು ಸಭೆ ನಡೆಸಿ, ರಾಹುಲ್ ಅವರನ್ನೇ ಮುಖ್ಯ ಕೋಚ್ ಆಗಿ ಮುಂದುವರೆಸುವುದಾಗಿ ಹೇಳಿ, ಅವರ ಅಧಿಕಾರವಧಿಯನ್ನು ಎರಡು ವರ್ಷಕ್ಕೆ ವಿಸ್ತರಣೆ ಮಾಡಿದೆ.