ನವದೆಹಲಿ, ಅ 25 (DaijiworldNews/AK): ಅಮೋಲ್ ಮುಜುಂದಾರ್ ಅವರನ್ನು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನೇಮಿಸಿದೆ
![](https://daijiworld.ap-south-1.linodeobjects.com/Linode/img_tv247/25-10-2023amol.jpg)
ರಮೇಶ್ ಪವಾರ್ ರಿಂದ ತೆರವವಾದ ಸ್ಥಾನಕ್ಕೆ ಅಮೋಲ್ ಮುಜುಂದಾರ್ ಆಯ್ಕೆ ಕುರಿತು ಬಿಸಿಸಿಐ ಎಕ್ಸ್ ಖಾತೆ ಯಲ್ಲಿ ಮಾಹಿತಿ ಹಂಚಿಕೊಂಡಿದೆ.
ದೇಶೀಯ ಕ್ರಿಕೆಟ್ನಲ್ಲಿ ಮುಂಚೂಣಿಯಲ್ಲಿದ್ದ ಕ್ರಿಕೆಟಿಗ ಅಮೋಲ್ ಮುಜುಂದಾರ್ ಅವರನ್ನು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಹೆಸರಿಸಲಾಗಿದೆ .
ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಸಿಗಲಿಲ್ಲ. ಮುಜುಂದಾರ್, 171 ಪಂದ್ಯಗಳಲ್ಲಿ 30 ಶತಕಗಳು ಸಹಿತ 11,000 ಪ್ರಥಮ ದರ್ಜೆ ರನ್ ಗಳಿಸಿ ಯಶಸ್ವಿಯಾಗಿದ್ದಾರೆ. ಮುಂಬೈ ತಂಡಕ್ಕೆ ಅನೇಕ ರಣಜಿ ಟ್ರೋಫಿ ಪ್ರಶಸ್ತಿ ಗೆಲ್ಲುವಲ್ಲಿ ಇವರ ಪಾತ್ರವು ಮಹತ್ವದಾಗಿತ್ತು.