ಉತ್ತರ ಪ್ರದೇಶ, ಡಿ 05 (DaijiworldNews/HR): ಉತ್ತರ ಪ್ರದೇಶದ ಕೊತ್ವಾಲಿ ಗ್ರಾಮದ ದೇವಕಲಿ ಪ್ರದೇಶದಲ್ಲಿ ರೇಣು ಎಂಬ ಮಹಿಳೆ ತನ್ನ ಗಂಡನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಗಂಡ ಜೈಪುರಕ್ಕೆ ಕೆಲಸಕ್ಕೆ ಹೋಗುವುದರಿಂದ ಆಕೆಗೆ ತಿಂಗಳಿಗಿಷ್ಟು ಎಂದು ಗಂಡ ಹಣ ಕಳುಹಿಸುತ್ತಿದ್ದ. ಆದರೆ ಆಕೆ ಆ ಹಣದಿಂದ ಲುಡೋ ಆಟದ ಚಟಕ್ಕೆ ಬಿದ್ದು ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾಳೆ.

ದಿನ ನಿತ್ಯ ಮನೆ ಮಾಲೀಕರೊಂದಿಗೆ ಲುಡೋ ಆಟವಾಡುವ ರೇಣು, ಸ್ವಲ್ಪ ಸ್ವಲ್ಪ ಹಣವನ್ನು ಬೆಟ್ಟಿಂಗ್ ಗಾಗಿ ಹಾಕುತ್ತಿದ್ದಳು. ಈ ಹಣ ಖಾಲಿಯಾಗಿ ಮುಂದೆ ಏನು ಮಾಡುವುದೆನ್ನುವ ಯೋಚನೆಯಲ್ಲಿದ್ದ ರೇಣು ಒಂದು ದಿನ ಲುಡೋವನ್ನು ತನ್ನನು ತಾನೇ ಪಣಕ್ಕಿಟ್ಟು ಆಡುತ್ತಾರೆ. ಈ ಆಟದಲ್ಲಿ ರೇಣು ಸೋಲುತ್ತಾರೆ.
ಇನ್ನು ಸೋತ ಬಳಿಕ ಏನು ಮಾಡುವುದೆಂದು ಈ ವಿಚಾರವನ್ನು ಗಂಡನಿಗೆ ಹೇಳುತ್ತಾರೆ. ಪತಿ ಈ ಬಗ್ಗೆ ಪ್ರತಾಪಗಢ ಠಾಣೆಯಲ್ಲಿ ದೂರು ನೀಡುತ್ತಾರೆ. ಇದರ ಕುರಿತು ರೇಣು ಪತಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಈ ಪೋಸ್ಟ್ ವೈರಲ್ ಆಗಿದೆ.
ಲುಡೋದಲ್ಲಿ ಸೋತಿದ್ದರಿಂದ ರೇಣು ಮನೆ ಮಾಲೀಕನೊಂದಿಗೆ ವಾಸಿಸಲು ಶುರು ಮಾಡಿದ್ದಾಳೆ. ಅವಳನ್ನು ಅಲ್ಲಿಂದ ವಾಪಾಸ್ ಕರೆ ತರಲು ಪ್ರಯತ್ನಿಸಿದೆ ಆದರೆ ಅವಳು ಬರಲು ಒಪ್ಪಲಿಲ್ಲ ಎಂದು ರೇಣು ಪತಿ ಹೇಳುತ್ತಾರೆ.