ಲಂಡನ್, ಸೆ. 06 (DaijiworldNews/SM): ಇಲ್ಲಿನ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 157 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ. ಆ ಮೂಲಕ ೫ ಪಂದ್ಯಗಳ ಸರಣಿಯಲ್ಲಿ ೨-೧ ಅಂತರದಿಂದ ಭಾರತ ಮುನ್ನಡೆ ಕಾಯ್ದುಕೊಂಡಿದೆ.
ಟೀಂ ಇಂಡಿಯಾ ನೀಡಿದ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ ನಲ್ಲಿ 210 ರನ್ ಗಳಿಗೆ ಸರ್ವ ಪತನಗೊಂಡು ಸೋಲೊಪ್ಪಿಕೊಂಡಿತು. ಭಾರತಿಯ ಶಿಸ್ತಿನ ದಾಳಿಗೆ ರನ್ ಪೇರಿಸಲಾಗದೆ, ಹೆಚ್ಚು ಸಮಯ ಮೈದಾನದಲ್ಲಿರಲಾಗದೆ ಆಂಗ್ಲ ಬ್ಯಾಟ್ಸ್ ಮನ್ ಗಳು ಫೆವೀಲಿಯನ್ ಪೆರೇಡ್ ನಡೆಸಿದರು.
ಇನ್ನು ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ ಕೊಹ್ಲಿ 50, ಶಾರ್ದೂಲ್ ಠಾಕೂರ್ 57 ರನ್ ಗಳ ನೆರವಿನಿಂದ 191 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ 290 ರನ್ ಪೇರಿಸಿತ್ತು. ಇನ್ನು ಎರಡನೇ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಮಿಂಚಿದರು. 127 ರನ್ ಸಿಡಿಸಿದರು. ಪೂಜಾರ 61, ಠಾಕೂರ್ 60, ಪಂತ್ 50 ರನ್ ಸಿಡಿಸಿದರು. ಅಂತಿಮವಾಗಿ ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ 466 ರನ್ ಸಿಡಿಸಿತು. ಇದಕ್ಕೆ ಉತ್ತರವಾಗಿ ೫ನೇ ದಿನ ಇಂಗ್ಲೆಂಡ್ ತಂಡ 210 ರನ್ ಗಳಿಸುವ ಮೂಲಕ ಸೋಲೊಪ್ಪಿಕೊಂಡಿತು.
ಎರಡೂ ಇನ್ನಿಂಗ್ಸ್ ಸೇರಿ ಉಮೇಶ್ ಯಾದವ್ ಆರು, ರವೀಂದ್ರ ಜಡೇಜಾ ಹಾಗೂ ಬೂಮ್ರಾ ತಲಾ ಎರಡು ವಿಕೆಟ್ ಪಡೆದರು.