ಲಂಡನ್, ಸೆ. 05 (DaijiworldNews/SM): ಇಲ್ಲಿನ ಓವೆಲ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಕುತೂಹಲ ಕೆರಳಿಸಿದ್ದು, ಕೊನೆಯ ದಿನದ ಕಠಿಣ ಸವಾಲನ್ನು ಇಂಗ್ಲೆಂಡ್ ದಿಟ್ಟವಾಗಿ ಎದುರಿಸುತ್ತಿದೆ.
೪ನೇ ದಿನ ಟೀಂ ಇಂಡಿಯಾ ನೀಡಿದ 368 ರನ್ ಗಳ ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆದುಕೊಂಡಿದೆ. ಕೊನೆಯ ದಿನ ಗೆಲುವಿನತ್ತ ದಾಪುಗಾಲಿರಿಸುವ ಸಾಧ್ಯತೆಗಳಿವೆ.
ಇನ್ನು ಇದಕ್ಕೂ ಮುನ್ನ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್ ನಲ್ಲಿ 466 ರನ್ ಪೇರಿಸಿತ್ತು. ಆ ಮೂಲಕ 368 ರನ್ ಗಳ ಮುನ್ನಡೆ ಕಾಯ್ದುಕೊಂಡಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 191 ರನ್ ಗಳಿಸಿದರೆ, ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ 290 ರನ್ ಗಳಿಸಿತ್ತು.