ಟೋಕಿಯೊ, ಸೆ. 05 (DaijiworldNews/PY): ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ನ ಎಸ್ಎಲ್4 ವಿಭಾಗದಲ್ಲಿ ಕನ್ನಡಿಗ ಸುಹಾಸ್ ಯತಿರಾಜ್ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ.
ಟೋಕಿಯೊದಲ್ಲಿ ಭಾನುವಾರ ನಡೆದ ಬ್ಯಾಡ್ಮಿಂಟನ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಲೂಕಸ್ ವಿರುದ್ದ ಸುಹಾಸ್ ಯತಿರಾಜ್ 1-2 ಸೆಟ್ಗಳ ಅಂತರದಲ್ಲಿ ಸೋಲುವ ಮೂಲಕ ಬೆಳ್ಳಿಗೆ ಕೊರಳೊಡ್ಡಿದ್ದಾರೆ. ಈ ಮೂಲಕ ಭಾರತದ ಪದಕಗಳ ಸಂಖ್ಯೆ 18ಕ್ಕೆ ಏರಿಕೆಯಾಗಿದ್ದು, 4 ಚಿನ್ನ, 7 ಬೆಳ್ಳಿ, 7 ಕಂಚಿನ ಪದಕ ದೊರೆತಿವೆ.
ಫ್ರಾನ್ಸ್ ಲೂಕಸ್ ವಿರುದ್ದ ಮೊದಲ ಸೆಟ್ನಲ್ಲಿ 21-15 ಅಂಕಗಳ ಅಂತರದಿಂದ ಗೆಲುವು ಸಾಧಿಸಿದ ಸುಹಾಸ್ ಯತಿರಾಜ್, ಎರಡನೇ ಸೆಟ್ನಲ್ಲಿ 17-21 ಹಿನ್ನೆಡೆ ಪಡೆದರೆ, ಮೂರನೇ ಸೆಟ್ನಲ್ಲಿ ಹಿನ್ನೆಡೆ ಸಾಧಿಸಿದ್ದು, ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.
ಸುಹಾಸ್ ಯತಿರಾಜ್ ಅವರು 2007ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿದ್ದು, ಕರ್ನಾಟಕದ ಹಾಸನದಲ್ಲಿ 1983ರ ಜುಲೈ 2ರಂದು ಹುಟ್ಟಿದ ಸುಹಾಸ್ ಇಂಜಿನಿಯರ್ ಪದವೀಧರರು. ಪ್ಯಾರಾಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಪಡೆಯುವ ಮೂಲಕ ಪ್ಯಾರಾಲಿಂಪಿಕ್ಸ್ನಲ್ಲಿ ಪದಕ ಗೆದ್ದ ಮೊದಲ ಜಿಲ್ಲಾಧಿಕಾರಿಯಾಗಿದ್ದಾರೆ.