ಟೋಕಿಯೊ, ಸೆ. 03 (DaijiworldNews/PY): ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದ ಶೂಟರ್ ಅವನಿ ಲೇಖರಾ ಅವರು ಕಂಚಿನ ಪದಕ ಗೆದ್ದಿದ್ದಾರೆ.
ಶುಕ್ರವಾರ ನಡೆದ ಆರ್8 ಈವೆಂಟ್ನ ಮಹಿಳೆಯರ 50 ಮೀ ರೈಫಲ್ 3ಪಿಎಸ್ಹೆಚ್ 1 ಸ್ಪರ್ಧೆಯಲ್ಲಿ 3ನೇ ಸ್ಥಾನ ಪಡೆದ ಅವನಿ ಕಂಚಿನ ಪದಕ ಗೆದ್ದಿದ್ದಾರೆ.
ಶೂಟಿಂಗ್ನ ಫೈನಲ್ ಪಂದ್ಯದಲ್ಲಿ 445.9ಅಂಕಗಳೊಂದಿಗೆ 3ಮೇ ಸ್ಥಾನಕ್ಕೇರಿದ್ದು, ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾರೆ.
ಅವನಿ ಲೇಖರಾ ಅವರು ಇದಕ್ಕೂ ಮುನ್ನ ಚಿನ್ನದ ಪದಕ ಗೆದ್ದಿದ್ದರು. 10 ಮೀಟರ್ನ ಏರ್ ರೈಫಲ್ ಶೂಟಿಂಗ್ನಲ್ಲಿ 249.6 ಸ್ಕೋರ್ ಮಾಡಿ ದಾಖಲೆ ನಿರ್ಮಿಸಿ ಚಿನ್ನ ಗೆದ್ದಿದ್ದರು.
ಈ ಮೂಲಕ 19 ಹರೆಯದ ಜೈಪುರದ ಅವನಿ ಲೇಖರಾ ಅವರು ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಎರಡು ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎನ್ನುವ ಸಾಧನೆಗೈದಿದ್ದಾರೆ.