ಲಂಡನ್, ಆ. 19 (DaijiworldNews/SM): ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯವರನ್ನು ಇಂಗ್ಲೆಂಡ್ ನ ಮಾಜಿ ಬ್ಯಾಟ್ಸ್ ಮನ್ ನಿಕ್ ಕಾಂಪ್ಟನ್ ನಿಂದಿಸಿದ್ದಾರೆ. ವಿರಾಟ್ ಕೊಹ್ಲಿ ಅವರದು ಕೊಟ್ಟ ನಾಲಿಗೆ ಎಂಬುವುದಾಗಿ ಉಲ್ಲೇಖಿಸಿದ್ದಾರೆ.
2012ರಲ್ಲಿ ಭಾರತದಲ್ಲಿ ನಡೆದ ಟೆಸ್ಟ್ ಸರಣಿಯ ಸಂದರ್ಭದಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿರುವ ಅವರು ವಿರಾಟ್ ಕೊಹ್ಲಿಯ ಬಗ್ಗೆ ಈ ಮಾತುಗಳನ್ನು ಆಡಿದ್ದಾರೆ. ಅಲ್ಲದೆ, ಕೊಹ್ಲಿಯನ್ನು ಟೀಕಿಸಿದ್ದಾರೆ. 2012ರಲ್ಲಿ ಅನುಭವಿಸಿದ ಅವಮಾನವನ್ನು ನಾನು ಎಂದಿಗೂ ಮರೆಯುವುದಿಲ್ಲ. ಕೊಹ್ಲಿ ನನ್ನನ್ನು ನಿಂದಿಸಿರುವುದು ಮರೆಯಲಾಗದ ಘಟನೆ ಎಂದು ಅವರು ಉಲ್ಲೇಖಿಸಿದ್ದಾರೆ.
ಕ್ರಿಕೆಟ್ ನಲ್ಲಿ ಹಲವು ದಾಖಲೆಗಳನ್ನು ಬರೆದಿರುವ ಸಚಿನ್ ತೆಂಡೂಲ್ಕರ್, ವಿಲಿಯಮ್ಸನ್ ಮತ್ತು ರೂಟ್ ಸೌಮ್ಯ ಸ್ವಾಭಾದವರು. ಸೌಜನ್ಯದಿಂದ ವರ್ತಿಸುವವರಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.