ನವದೆಹಲಿ, ಆ.11 (DaijiworldNews/HR): ಯುಎಇನಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ ನಂತರ ಟೀಮ್ ಇಂಡಿಯಾ ಮುಖ್ಯ ತರಬೇತುದಾರನ ಸ್ಥಾನವನ್ನು ರವಿಶಾಸ್ತ್ರಿ ತೊರೆಯಲಿದ್ದಾರೆ ಎಂದು ತಿಳಿದು ಬಂದಿದೆ.
ಭಾರತ ಹಾಗೂ ಇಂಗ್ಲೆಂಡ್ ನಡುವಣ ಲಾರ್ಡ್ಸ್ ಟೆಸ್ಟ್ ಸಮಯದಲ್ಲಿ ಮಂಡಳಿ ಅಧಿಕಾರಿಗಳು, ರವಿಶಾಸ್ತ್ರಿ ಹಾಗೂ ಕೋಚಿಂಗ್ ಪ್ಯಾನೆಲ್ ಜೊತೆಗೆ ಮಾತುಕತೆ ನಡೆಸಲಿದ್ದು, ತರಬೇತುದಾರರು ಕೋಚಿಂಗ್ ಪ್ಯಾನೆಲ್ನಲ್ಲಿ ಮುಂದುವರಿಯಲು ಆಸಕ್ತಿ ತೋರದಿದ್ದರೆ ಆ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಬಿಬಿಸಿಯು ತಿಳಿಸಿರುವುದಾಗಿ ವರದಿಯಾಗಿದೆ.
ಇನ್ನು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ಹುದ್ದೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಮಂಗಳವಾರದಂದು ಅರ್ಜಿ ಆಹ್ವಾನಿಸಿದ್ದು, ಅದೇ ವೇಳೆ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ಗೆ ಮತ್ತಷ್ಟು ದೊಡ್ಡ ಹುದ್ದೆಯನ್ನು ಮಂಡಳಿಯು ನೀಡಬಹುದು ಎನ್ನಲಾಗಿದೆ.
ರವಿಶಾಸ್ತ್ರಿ ಒಂದು ವೇಳೆ ನಿರ್ಗಮಿಸಲು ಬಯಸಿದರೆ ನೂತನ ಕೋಚ್ ಆಯ್ಕೆಯಲ್ಲಿ ರಾಹುಲ್ ದ್ರಾವಿಡ್ ಮುಂಚೂಣಿಯಲ್ಲಿ ಗುರುತಿಸಿದ್ದು, ಮುಂಬರುವ ಬೆಳವಣಿಗೆಗಳು ಹೆಚ್ಚಿನ ಕುತೂಹಲ ಕೆರಳಿಸಿವೆ.