ಟೋಕಿಯೊ, ಆ 04 (DaijiworldNews/PY): ಟೋಕಿಯೊ ಒಲಿಂಪಿಕ್ಸ್ನಲ್ಲಿ ಸೆಮಿ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದ ಭಾರತದ ವನಿತೆಯರ ಹಾಕಿ ತಂಡ ಅರ್ಜೆಂಟೀನಾದ ವಿರುದ್ಧ 1-2 ಗೋಲುಗಳ ಅಂತರದಿಂದ ಸೋಲು ಅನುಭವಿಸಿದ್ದು, ಕಂಚಿನ ಪದಕಕ್ಕಾಗಿ ಇಂಗ್ಲೆಂಡ್ ವಿರುದ್ದ ಸೆಣಸಬೇಕಿದೆ.
ಇಂದು ಅರ್ಜೆಂಟೀನಾ ವಿರುದ್ದ ಭಾರತ ವನಿತೆಯರ ಹಾಕಿ ತಂಡ ಸೆಮಿಫೈನಲ್ ಅನ್ನು ಸಮರ್ಥವಾಗಿ ಎದುರಿಸಿತ್ತು. ಗುರ್ಜಿತ್ ಕೌರ್ ಅವರು ಸೆಮಿಫೈನಲ್ ಪಂದ್ಯದ ಎರಡನೇ ನಿಮಿಷದಲ್ಲಿ ಗೋಲು ದಾಖಲಿಸಿದ್ದರು.
ಅರ್ಜೆಂಟೀನಾ ತಂಡದ ನಾಯಕಿ ಮರಿಯಾ ಬ್ಯಾರಿಯೊನ್ಯುವೊ ಭಾರತದ ವನಿತೆಯರ ತಂಡದ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ್ದು, ಪಂದ್ಯದ 18ನೇ ಹಾಗೂ 36ನೇ ನಿಮಿಷದಲ್ಲಿ ಗೋಲು ದಾಖಲಿಸುವ ಮುಖೇನ ಅರ್ಜೆಂಟೀನಾ ಗೆಲುವು ಸಾಧಿಸಿದೆ.