ಟೋಕಿಯೊ, ಆ 03 (DaijiworldNews/MS): ಬಹು ನಿರೀಕ್ಷಿತ ಭಾರತದ ಪುರುಷರ ಹಾಕಿ ಪಂದ್ಯ ನಡೆಯುತ್ತಿದ್ದು ಇಡೀ ದೇಶದ ಕಣ್ಣು ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತ ಮತ್ತು ಬೆಲ್ಜಿಯಂ ನಡುವೆ ನಡೆಯುತ್ತಿರುವ ಪುರುಷರ ಹಾಕಿ ಸೆಮಿಫೈನಲ್ ಪಂದ್ಯದ ಮೇಲೆ ನೆಟ್ಟಿದೆ.
ಇಂದು ಸೆಮಿ ಫೈನಲ್ ಪಂದ್ಯವಾಗಿದ್ದು, ಹೈವೋಲ್ಟೇಜ್ ಪಂದ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿಯ ಪಂದ್ಯವನ್ನು ವೀಕ್ಷಿಸಲು ಟ್ಯೂನ್ ಮಾಡಿದ್ದಾರೆ. ಅಲ್ಲದೆ ಈ ಬಗ್ಗೆ ಟ್ವೀಟ್ ಮಾಡಿರುವ ಅವರು, " ಇದುವರೆಗೆ ಒಲಿಂಪಿಕ್ಸ್ನಲ್ಲಿ ತಂಡವು ಏನನ್ನು ಸಾಧಿಸಿದೆ ಎಂಬುದರ ಬಗ್ಗೆ ಹೆಮ್ಮೆಪಡುತ್ತೇನೆ ಎಂನಾನು ಭಾರತ ಮತ್ತು ಬೆಲ್ಜಿಯಂ ಹಾಕಿ ಪುರುಷರ ಸೆಮಿ-ಫೈನಲ್ ಅನ್ನು ವೀಕ್ಷಿಸುತ್ತಿದ್ದೇನೆ. ನಮ್ಮ ತಂಡದ ಮತ್ತು ಅವರಲ್ಲಿರುವ ಕೌಶಲ್ಯದ ಬಗ್ಗೆ ಹೆಮ್ಮೆಪಡುತ್ತೇನೆ. ಅವರಿಗೆ ಶುಭ ಹಾರೈಸುತ್ತೇನೆ" ಎಂದು ಹೇಳಿದ್ದಾರೆ