ನವದೆಹಲಿ, ನ.16 (DaijiworldNews/AA): ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ಅಧ್ಯಕ್ಷರಾಗಿ ೨ನೇ ಅವಧಿಗೆ ಜಯ್ ಶಾ ಅವಿರೋಧವಾಗಿ ಮರು ನೇಮಕಗೊಂಡಿದ್ದಾರೆ.

ಐಸಿಸಿಯ ಅಧ್ಯಕ್ಷರಾಗಿ ಜಯ್ ಶಾ ಅವರನ್ನು ಎರಡನೇ ಅವಧಿಗೆ ನೇಮಕ ಮಾಡಲಾಗಿದೆ ಎಂದು ತಿಳಿದುಬಂದಿದೆ. ಐಸಿಸಿ ನಿರ್ದೇಶಕರು ಮಂಡಿಸಿದ ಪ್ರಸ್ತಾವನೆಯ ಮೇರೆಗೆ ಬಾಲಿಯಲ್ಲಿ ನಡೆದ ಜಾಗತಿಕ ಕ್ರಿಕೆಟ್ ಸಂಸ್ಥೆಯ ಮಂಡಳಿ ಮತ್ತು ಸಮಿತಿ ಸಭೆಗಳಲ್ಲಿ ಈ ನಿರ್ಧಾರವನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.
ಮರುನೇಮಕಕ್ಕೆ ಧನ್ಯವಾದ ತಿಳಿಸಿದ ಜಯ್ ಶಾ, "ಐಸಿಸಿಯನ್ನು ಮುನ್ನಡೆಸುವುದು ಗೌರವ ಮತ್ತು ಪ್ರಮುಖ ಜವಾಬ್ದಾರಿ ಎಂದು ತಿಳಿಸಿದರು. ಕ್ರಿಕೆಟ್ ಒಂದು ರೋಮಾಂಚಕ ಹಂತವನ್ನು ಪ್ರವೇಶಿಸುತ್ತಿದೆ. 2028 ಲಾಸ್ ಏಂಜಲೀಸ್ನಲ್ಲಿ ನಡೆಯುವ ಒಲಿಂಪಿಕ್ ಕ್ರೀಡಾಕೂಟಕ್ಕೆ ಮರಳುವ ಮೂಲಕ ಇದು ಹೈಲೈಟ್ ಆಗಿದೆ" ಎಂದು ಹೇಳಿದ್ದಾರೆ.