ನವದೆಹಲಿ, ನ.14 (DaijiworldNews/AA): ಅಂಡರ್ 19 ಏಷ್ಯಾಕಪ್ ರೋಚಕ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಭಾರತ ಒಂದು ವಿಕೆಟ್ನಿಂದ ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ ಟೀಂ ಇಂಡಿಯಾಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, 'ಭಾರತೀಯ ಕ್ರಿಕೆಟ್ಗೆ ಇದೊಂದು ಅದ್ಭುತ ದಿನ! ಇಂದಿನ ಅತ್ಯುತ್ತಮ ಪ್ರದರ್ಶನ ಹಾಗೂ ಪುರುಷರ ಅಂಡರ್-19 ಏಷ್ಯಾಕಪ್ 2026ರ ಪ್ರಶಸ್ತಿ ಗೆದ್ದಿರುವ ನಮ್ಮ ಯುವ ಕ್ರಿಕೆಟಿಗರ ಬಗ್ಗೆ ಅಪಾರ ಹೆಮ್ಮೆ ಇದೆ. ಅವರ ಈ ಸಾಧನೆ ಹಲವು ಯುವಕರಿಗೆ ಸ್ಫೂರ್ತಿಯಾಗಲಿದೆ. ಮುಂದಿನ ಪಂದ್ಯಗಳು ಹಾಗೂ ಭವಿಷ್ಯದ ಪ್ರಯತ್ನಗಳಿಗೆ ತಂಡಕ್ಕೆ ಶುಭಾಶಯಗಳು' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಲ್ ಅಮೆರಾತ್ ಕ್ರಿಕೆಟ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲಿಗೆ ಪಾಕ್ ಬ್ಯಾಂಟಿಂಗ್ ಮಾಡಿ 338 ರನ್ಗಳ ಬೃಹತ್ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ಭಾರತ ತಂಡ ಕೊನೆಯ ಓವರ್ನಲ್ಲಿ 9 ವಿಕೆಟ್ ನಷ್ಟಕ್ಕೆ 339 ರನ್ ಗಳಿಸಿ ರೋಚಕ ಗೆಲುವು ಸಾಧಿಸಿತು.