ಮುಂಬೈ, ನ.11 (DaijiworldNews/AA): ಭಾರತದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇದೀಗ ಪಂಜಾಬ್ ಕಿಂಗ್ಸ್ ತಂಡವನ್ನು ಸೇರಿದ್ದು, ನಾಯಕ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ತಮ್ಮ ಆಲ್ರೌಂಡ್ ಆಟದ ಮೂಲಕ ತಂಡಕ್ಕೆ ನೆರವಾಗುವ ಜೊತೆಗೆ, ಕೋಚ್ ರಿಕಿ ಪಾಂಟಿಂಗ್ ಹಾಗೂ ಇಡೀ ಪಂಜಾಬ್ ತಂಡದ ಬೆನ್ನಿಗೆ ತಾನು ಸದಾ ನಿಲ್ಲುವುದಾಗಿ ತಿಳಿಸಿದ್ದಾರೆ.

ಪಂಜಾಬ್ ಕಿಂಗ್ಸ್ ತಂಡಕ್ಕೆ ಸೇರುತ್ತಿರುವ ಖುಷಿಯನ್ನು ಹಾರ್ದಿಕ್ ಪಾಂಡ್ಯ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, "ಸತ್ ಶ್ರೀ ಅಕಾಲ್, ನನ್ನ ನಾಯಕ ಶ್ರೇಯಸ್. ನನ್ನ ಕೋಚ್ ರಿಕಿ. ನನ್ನ ತಂಡ, ಇಡೀ ಪಂಜಾಬ್. ನಾನು ನಿಮ್ಮೆಲ್ಲರ ಬೆನ್ನಿಗೆ ನಿಂತಿದ್ದೇನೆ" ಎಂದು ಪೋಸ್ಟ್ ಮಾಡಿದ್ದಾರೆ.
ಹಾರ್ದಿಕ್ ಪಾಂಡ್ಯ 16.35 ಕೋಟಿ ಬದಲಿಗೆ ೧೮ ಕೋಟಿ ಸಂಭಾವನೆ ಪಡೆಯಲಿದ್ದಾರೆ. ನಾಯಕ ಹಾರ್ದಿಕ್ ಪಾಂಡ್ಯ ಪಂಜಾಬ್ ಸೇರುತ್ತಿರುವ ಬೆನ್ನಲ್ಲೇ ಭಾರತದ ಪ್ರಮುಖ ಟಿ೨೦ ಬೌಲರ್ ಅರ್ಷದೀಪ್ ಸಿಂಗ್ 18 ಕೋಟಿ ಸಂಭಾವನೆಯೊಂದಿಗೆ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಲಿದ್ದಾರೆ.