ಸಾರ್ಬ್ರೂಕನ್, ನ.01 (DaijiworldNews/AA): ಹೈಲೋ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ಫೈನಲ್ನಲ್ಲಿ ಪಿವಿ ಸಿಂಧು ಜಯಗಳಿಸಿದ್ದಾರೆ.

ಜರ್ಮನಿಯ ಸಾರ್ಬ್ರೂಕನ್ನಲ್ಲಿ ನಡೆದ ಈ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸಿಂಧು ಉತ್ತಮ ಪ್ರದರ್ಶನ ನೀಡಿದರು. ಫೈನಲ್ನಲ್ಲಿ ಪಿವಿ ಸಿಂಧು ಡೆನ್ಮಾರ್ಕ್ನ ಲೈನ್ ಕ್ಯಾಸರ್ಫೆಲ್ಡ್ ಅವರನ್ನು 21-12, 21-14 ಅಂತರದಿಂದ ಸೋಲಿಸಿ ಪ್ರಶಸ್ತಿ ಗಳಿಸಿದ್ದಾರೆ. ವಿಶೇಷವೆಂದರೆ ಇಡೀ ಟೂರ್ನಿಯಲ್ಲಿ ಒಂದೂ ಗೇಮ್ ಸೋಲದೆ ಸಿಂಧು ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡಿದ್ದಾರೆ.
ಸಿಂಧು ಜುಲೈನಲ್ಲಿ ನಡೆದ ಜಪಾನ್ ಓಪನ್ ಸೂಪರ್ 750 ಗೆದ್ದಿದ್ದರು. ಇದೀಗ ಹೈಲೋ ಓಪನ್ ಗೆಲ್ಲುವ ಮೂಲಕ ಈ ವರ್ಷದ ಎರಡನೇ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.