ಮುಂಬೈ, ಅ.27 (DaijiworldNews/AK): ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಎಡಗೈ ಓಪನರ್ ಅಭಿಷೇಕ್ ಶರ್ಮಾ, ಕೇವಲ 35 ಎಸೆತಗಳಲ್ಲಿ ಶತಕ ಪೂರೈಸಿ ಅಬ್ಬರಿಸಿದರು. ಆದರೆ, ಈ ಬಿರುಗಾಳಿಯ ಇನಿಂಗ್ಸ್ ನಡುವೆ ಅವರು 7 ಎಸೆತಗಳಲ್ಲಿ ಯಾವುದೇ ರನ್ ಗಳಿಸದೆ ಡಾಟ್ ಬಾಲ್ ಆಡಿದ್ದರು.

ಈ ಲೆಕ್ಕಾಚಾರದ ಪ್ರಕಾರ, ಒಂದು ವೇಳೆ ಅಭಿಷೇಕ್ ಈ 7 ಎಸೆತಗಳಲ್ಲೂ ರನ್ ಅಥವಾ ಬೌಂಡರಿ ಗಳಿಸುವಲ್ಲಿ ಯಶಸ್ವಿಯಾಗಿದ್ದರೆ, ಅವರು ಕೇವಲ 26 ಅಥವಾ 27 ಎಸೆತಗಳ ಒಳಗೇ ಶತಕದ ಗಡಿ ದಾಟಬಹುದಿತ್ತು. ಈ ಮೂಲಕ ಜಾಗತಿಕ ಕ್ರಿಕೆಟ್ ಇತಿಹಾಸದಲ್ಲೇ ಅತಿ ವೇಗದ ಶತಕದ ಒಡೆಯ ಎನಿಸಿಕೊಳ್ಳಬಹುದಿತ್ತು.
ಪ್ರಸ್ತುತ ಈ ಜಾಗತಿಕ ದಾಖಲೆ ಎಸ್ಟೋನಿಯಾ ದೇಶದ ಸಾಹಿಲ್ ಚೌಹಾಣ್ ಹೆಸರಿನಲ್ಲಿದೆ. 2024ರಲ್ಲಿ ಸೈಪ್ರಸ್ ವಿರುದ್ಧ ನಡೆದ ಪಂದ್ಯದಲ್ಲಿ ಸಾಹಿಲ್ ಕೇವಲ 27 ಎಸೆತಗಳಲ್ಲಿ ಶತಕ ಹೊಡೆದು ಈ ಅಸಾಧ್ಯ ದಾಖಲೆಯನ್ನು ಬರೆದಿದ್ದರು. ಎರಡು ವರ್ಷಗಳ ಹಳೆಯದಾದ ಈ ದಾಖಲೆಯನ್ನು ಮುರಿಯಲು ಅಭಿಷೇಕ್ ಶರ್ಮಾಗೆ ಸಾಧ್ಯವಾಗದಿದ್ದರೂ, ಮತ್ತೊಂದು ಅಪರೂಪದ ಕೀರ್ತಿ ಇವರ ಪಾಲಾಗಿದೆ.
ಅಂದರೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಪೂರ್ಣ ಸದಸ್ಯತ್ವ ಹೊಂದಿರುವ ಬಲಿಷ್ಠ ರಾಷ್ಟ್ರಗಳ ಪೈಕಿ, ಟಿ20 ಕ್ರಿಕೆಟ್ನಲ್ಲಿ ಅತಿ ವೇಗದ ಶತಕ ಸಿಡಿಸಿದ ವಿಶ್ವ ದಾಖಲೆ ಈಗಲೂ ಅಭಿಷೇಕ್ ಶರ್ಮಾ ಹೆಸರಿನಲ್ಲೇ ಭದ್ರವಾಗಿದೆ. ಅವರು 2026ರಲ್ಲೇ ಅಫ್ಘಾನಿಸ್ತಾನ್ ವಿರುದ್ಧ ಕೇವಲ 30 ಎಸೆತಗಳಲ್ಲಿ ಶತಕ ಪೂರೈಸಿ ಈ ಐತಿಹಾಸಿಕ ಸಾಧನೆ ಮಾಡಿದ್ದರು.
ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ ಈ ದಾಖಲೆಯನ್ನು ಮುರಿದು ಹೊಸ ಇತಿಹಾಸ ಬರೆಯುವ ಅವಕಾಶ ಅಭಿಷೇಕ್ ಮುಂದಿತ್ತು. ಆದರೆ ಶತಕದ ಹತ್ತಿರ ಬಂದಾಗ ಎಚ್ಚರಿಕೆಯ ಆಟಕ್ಕೆ ಮುಂದಾಗಿದ್ದರಿಂದ ಸಾರ್ವಕಾಲಿಕ ದಾಖಲೆ ಕೈ ತಪ್ಪಿದೆ. ಈ ವಿಶ್ವ ದಾಖಲೆ ಕೈ ತಪ್ಪಿದರೂ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಮೂರು ಬಾರಿ ಅತೀ ಕಡಿಮೆ ಎಸೆತಗಳಲ್ಲಿ ಸೆಂಚುರಿ ಸಿಡಿಸಿದ ವಿಶ್ವ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಕೇವಲ 7 ಡಾಟ್ ಬಾಲ್ಗಳಿಂದ ಅಭಿಷೇಕ್ ಶರ್ಮಾ ಅವರ ಸಾರ್ವಕಾಲಿಕ ವಿಶ್ವ ದಾಖಲೆ ಕೈತಪ್ಪಿರಬಹುದು. ಆದರೆ, ಅವರು ಮೈದಾನದಲ್ಲಿ ಸೃಷ್ಟಿಸಿದ ರನ್ ಬಿರುಗಾಳಿ ಮಾತ್ರ ಜಾಗತಿಕ ಕ್ರಿಕೆಟ್ನಲ್ಲಿ ಅವರ ದೀರ್ಘಕಾಲದ ಬ್ಯಾಟಿಂಗ್ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.