ಎಡಿನ್ಬರ್ಗ್, ಅ.18 (DaijiworldNews/AA): ಸ್ಕಾಟ್ಲ್ಯಾಂಡ್ ತಂಡದ ಪ್ರಮುಖ ವೇಗದ ಬೌಲರ್ ಬ್ರಾಡ್ ವೀಲ್ ಅವರು ತಮ್ಮ 30ನೇ ವಯಸ್ಸಿನಲ್ಲಿಯೇ ವೃತ್ತಿಪರ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.

ತಮ್ಮ ನಿವೃತ್ತಿ ಕುರಿತು ಅಧಿಕೃತವಾಗಿ ಮಾಹಿತಿ ನೀಡಿದ ಅವರು, "ನನ್ನ ಬೆನ್ನಿನ ನಾಲ್ಕು ಸ್ಟ್ರೆಸ್ ಫ್ರಾಕ್ಚರ್ಗಳು ಮತ್ತು ಇತ್ತೀಚೆಗೆ ನಡೆದ ಮಂಡಿಯ ಶಸ್ತ್ರಚಿಕಿತ್ಸೆಯ ನಂತರ, ವೇಗದ ಬೌಲಿಂಗ್ನ ದೈಹಿಕ ಒತ್ತಡವನ್ನು ತಡೆದುಕೊಳ್ಳಲು ನನ್ನ ದೇಹ ಸಹಕರಿಸುತ್ತಿಲ್ಲ. ಇದು ಸುಲಭದ ನಿರ್ಧಾರವಾಗಿರಲಿಲ್ಲ, ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿತ್ತು. ಹೀಗಾಗಿ ಕ್ರಿಕೆಟ್? ಕೆರಿಯರ್?ಗೆ ವಿದಾಯ ಹೇಳುತ್ತಿದ್ದೇನೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬ್ರಾಡ್ ವೀಲ್ 2015 ರಲ್ಲಿ ಹ್ಯಾಂಪ್ಶೈರ್ ಮೂಲಕ ದೇಶಿ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. 2016 ರಲ್ಲಿ ಹಾಂಗ್ ಕಾಂಗ್ ವಿರುದ್ಧ ಸ್ಕಾಟ್ಲ್ಯಾಂಡ್ ಪರ ಪಾದಾರ್ಪಣೆ ಮಾಡಿದರು. ವೀಲ್, 18 ಏಕದಿನ ಮತ್ತು 26 ಟಿ20 ಸೇರಿ ಒಟ್ಟು 44 ಅಂತರರಾಷ್ಟ್ರೀಯ ಪಂದ್ಯಗಳಿಂದ 51 ವಿಕೆಟ್ಗಳನ್ನು ಗಳಿಸಿದ್ದಾರೆ.
ಬ್ರಾಡ್ ವೀಲ್ ಅವರು ಸ್ಕಾಟ್ಲ್ಯಾಂಡ್ ಪರ ನಾಲ್ಕು ಐಸಿಸಿ ಟಿ20 ವಿಶ್ವಕಪ್ಗಳಲ್ಲಿ ಪ್ರತಿನಿಧಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ನಡೆದ ಟಿ20 ವಿಶ್ವಕಪ್ನಲ್ಲೂ ಇವರು ಭಾಗವಹಿಸಿದ್ದರು.
2021 ರಲ್ಲಿ ಬಾಂಗ್ಲಾದೇಶ್ ಮತ್ತು 2022 ರ ಟಿ20 ವಿಶ್ವಕಪ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸ್ಕಾಟ್ಲ್ಯಾಂಡ್ ಸಾಧಿಸಿದ ಗೆಲುವಿನಲ್ಲಿ ಬ್ರಾಡ್ ವೀಲ್ ಪ್ರಮುಖ ಪಾತ್ರ ವಹಿಸಿದ್ದರು. ಇನ್ನು ಹ್ಯಾಂಪ್ಶೈರ್ ತಂಡದ ಪರ 131 ದೇಶಿ ಪಂದ್ಯಗಳನ್ನಾಡಿರುವ ಇವರು, ತಂಡವು 2018 ರಲ್ಲಿ ರಾಯಲ್ ಲಂಡನ್ ಒನ್-ಡೇ ಕಪ್ ಮತ್ತು 2022 ರಲ್ಲಿ ವೈಟಾಲಿಟಿ ಬ್ಲಾಸ್ಟ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖರಾಗಿದ್ದರು.