ನಗೋಯಾ, ಸೆ.19 (DaijiworldNews/AA): ಮಿನಿ ಒಲಿಂಪಿಕ್ಸ್ ಖ್ಯಾತಿಯ, ಏಷ್ಯಾಡ್ ಎಂದು ಕರೆಯಲ್ಪಡುವ ಏಷ್ಯನ್ ಕ್ರೀಡಾಕೂಟದ 20ನೇ ಆವೃತ್ತಿಯು ಜಪಾನ್ನ ಐಚಿ ನಾಗೋಯಾದಲ್ಲಿ ಶನಿವಾರ ಆರಂಭವಾಗಲಿದೆ.

ಉದ್ಘಾಟನೆ ಸಮಾರಂಭದಲ್ಲಿ ಭಾರತದ ಧ್ವಜಾಧಾರಿಯಾಗಿ ಒಲಿಂಪಿಯನ್ ಶೂಟರ್ ಮನು ಭಾಕರ್ ಅವರೊಂದಿಗೆ ಅನುಭವಿ ಕಬಡ್ಡಿ ಆಟಗಾರ ಪವನ್ ಸೆಹ್ರಾವತ್ ತಂಡವನ್ನು ಮುನ್ನಡೆಸಲಿದ್ದಾರೆ.
ಭಾರತದ 503 ಅಥ್ಲೀಟ್ಗಳು 36 ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಈ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಕ್ರೀಡಾಪಟುಗಳು 2028ರ ಒಲಿಂಪಿಕ್ಸ್ ಪ್ರವೇಶಕ್ಕೆ ಅರ್ಹತೆ ಪಡೆಯುವ ಅವಕಾಶವಿದೆ.