ನಿಸ್ಶಿನ್, ಸೆ.18 (DaijiworldNews/AA): ಏಷ್ಯಾನ್ ಕ್ರೀಡಾಕೂಟದ ಕ್ರಿಕೆಟ್ನಲ್ಲಿ ಜಪಾನ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಭಾರತದ ಮಹಿಳಾ ಕ್ರಿಕೇಟ್ ತಂಡ ಸೆಮಿಫೈನಲ್ ಪ್ರವೇಶಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಜಪಾನ್ ತಂಡ 19.5 ಓವರ್ಗಳಲ್ಲಿ 10 ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ ಕೇವಲ 5 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 59 ರನ್ ಗಳಿಸಿ ಜಯ ಸಾಧಿಸಿತು.
ಭಾರತದ ಪರ ಶಫಾಲಿ ವರ್ಮಾ ಔಟಾಗದೇ 15 ಎಸೆತಗಳಲ್ಲಿ 40 ರನ್ ಹೊಡೆದರು. ರಿಚಾ ಘೋಷ್ ಔಟಾಗದೇ 12 ರನ್ ಹೊಡೆದರು. ಇನ್ನು ಶ್ರೀ ಚರಣಿ 4 ವಿಕೆಟ್, ಶಫಾಲಿ ವರ್ಮಾ 2 ವಿಕೆಟ್ ಹಾಗೂ ಶ್ರೇಯಾಂಕಾ ಪಾಟೀಲ್, ದೀಪ್ತಿ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದರು.