ಮುಂಬೈ, ಮೇ. 18 (DaijiworldNews/ AK): ಐಪಿಎಲ್ 2026 ಪ್ಲೇ ಆಫ್ ರೇಸ್ನಲ್ಲಿ ಪಂಜಾಬ್ ಕಿಂಗ್ಸ್ ಸತತ ಆರು ಸೋಲುಗಳಿಂದ ಭಾರಿ ಹಿನ್ನಡೆ ಅನುಭವಿಸಿದೆ. ತಂಡದ ಕಳಪೆ ಪ್ರದರ್ಶನಕ್ಕೆ ನಾಯಕ ಶ್ರೇಯಸ್ ಅಯ್ಯರ್ ಮೇಲೆ ಪಿಬಿಕೆಎಸ್ ಪ್ರೀತಿ ಜಿಂಟಾ ಅಸಮಾಧಾನಗೊಂಡಿದ್ದಾರೆ.

ಐಪಿಎಲ್ ಈ ಋತುವಿನ ಆರಂಭದಿಂದಲೂ ಉತ್ತಮ ಪ್ರದರ್ಶನದೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿದ್ದ ಪಿಬಿಕೆಎಸ್ ಈಗ 4ನೇ ಸ್ಥಾನಕ್ಕೆ ಕುಸಿತ ಕಂಡಿದೆ. ತಂಡದ ಪ್ಲೇ ಆಫ್ ಹಾದಿ ಬಲು ಕಠಿಣ ಎನ್ನುವಂತಾಗಿದೆ. ಇಂದಿನ ಪಂದ್ಯದಲ್ಲಿ ಎಸ್ಆರ್ಹೆಚ್ ವಿರುದ್ಧ ಸಿಎಸ್ಕೆ ಗೆದ್ದರೆ ಶ್ರೇಯಸ್ ಪಡೆ ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿಯಲಿದೆ.
ಭಾನುವಾರ ಧರ್ಮಶಾಲಾದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ತಂಡವು 23 ರನ್ಗಳಿಂದ ಆರ್ಸಿಬಿ ವಿರುದ್ಧ ಸೋಲನುಭವಿಸಿತು. ಪಂದ್ಯದ ನಂತರ ಪಿಬಿಕೆಎಸ್ ಮುಖ್ಯ ತರಬೇತುದಾರ ಡ್ರೆಸ್ಸಿಂಗ್ ಕೋಣೆಯಲ್ಲಿ ನಿರಾಶೆಗೊಂಡರು. ನಾಯಕ ಶ್ರೇಯಸ್ ಅಯ್ಯರ್ ಮೈದಾನದಲ್ಲಿ ಸಹ-ಮಾಲೀಕರ ಪ್ರೀತಿ ಜಿಂಟಾ ಅವರೊಂದಿಗೆ ಗಂಭೀರ ಚರ್ಚೆ ನಡೆಸುತ್ತಿರುವ ವೀಡಿಯೋ ವೈರಲ್ ಆಗಿದೆ.
ಪಂಜಾಬ್ ಕಿಂಗ್ಸ್ ಮುಂದಿನ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೆಣಸಲಿದೆ.