ಬೆಂಗಳೂರು, ಮೇ. 16 (DaijiworldNews/AA): ಐಪಿಎಲ್ 2026ರ ನಿರ್ಣಾಯಕ ಹಂತದಲ್ಲಿ ಆರ್ಸಿಬಿ ಇಂಗ್ಲೆಂಡ್ನ ಅನುಭವಿ ವೇಗಿ ರಿಚರ್ಡ್ ಗ್ಲೀಸನ್ ಅವರನ್ನು 1.6 ಕೋಟಿ ರೂಪಾಯಿ ಮೂಲ ಬೆಲೆಗೆ ತನ್ನ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ.

ಶ್ರೀಲಂಕಾದ ವೇಗಿ ನುವಾನ್ ತುಷಾರ್ ಅವರು ಶ್ರೀಲಂಕಾ ಕ್ರಿಕೆಟ್ ಮಂಡಳಿಯಿಂದ ಎನ್ಓಸಿ ಪಡೆಯಲು ವಿಫಲರಾದ ಕಾರಣ ಐಪಿಎಲ್ನಿಂದ ಹೊರಗುಳಿದಿದ್ದಾರೆ. ನುವಾನ್ ತುಷಾರ್ ಅವರ ಬದಲಿ ಆಟಗಾರರಾಗಿ ಇಂಗ್ಲೆಂಡ್ನ ರಿಚರ್ಡ್ ಗ್ಲೀಸನ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಆರ್ಸಿಬಿ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ.
ಸದ್ಯ ಆರ್ಸಿಬಿಗೆ ಸೇರ್ಪಡೆಯಾಗಿರುವ 38 ವರ್ಷದ ಗ್ಲೀಸನ್ ಇಂಗ್ಲೆಂಡ್ ಪರ 6 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಒಟ್ಟು 9 ವಿಕೆಟ್ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಪಾಕಿಸ್ತಾನ್ ಸೂಪರ್ ಲೀಗ್(ಪಿಎಸ್ಎಲ್)ನಲ್ಲಿ 7.14 ಎಕಾನಮಿ ರೇಟ್ನಲ್ಲಿ ರನ್ ನೀಡುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಉತ್ತಮ ಫಾರ್ಮ್ನಲ್ಲಿರುವ ಗ್ಲೀಸನ್ ಅವರನ್ನು ಆರ್ಸಿಬಿ ಮ್ಯಾನೇಜ್ಮೆಂಟ್ ಆಯ್ಕೆ ಮಾಡಿಕೊಂಡಿದೆ.
ಗ್ಲೀಸನ್ ಅವರ ಎತ್ತರವೇ ಅವರಿಗೆ ಪ್ಲಸ್ ಪಾಯಿಂಟ್ ಆಗಿದ್ದು, ಅವರು 140+ ಕಿಮೀ ವೇಗದಲ್ಲಿ ಬೌಲಿಂಗ್ ಮಾಡಬಲ್ಲರು. ಹಠಾತ್ ಬೌನ್ಸ್ ಎಸೆಯಬಲ್ಲ ಸಾಮರ್ಥ್ಯ ಹೊಂದಿರುವ ಗ್ಲೀಸನ್, ಡೆತ್ ಓವರ್ಗಳಲ್ಲಿ ನಿಖರವಾದ ಯಾರ್ಕರ್ ಮತ್ತು ಶಾರ್ಪ್ ಬೌನ್ಸರ್ಗಳನ್ನು ಎಸೆದು ತಂಡಕ್ಕೆ ನೆರವಾಗುತ್ತಾರೆ.
ರಿಚರ್ಡ್ ಗ್ಲೀಸನ್ಗೆ ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ಪರ ಆಟವಾಡಿದ್ದರು. ಹೀಗಾಗಿ ಐಪಿಎಲ್ ವಾತಾವರಣಕ್ಕೆ ಅವರು ಬೇಗನೆ ಹೊಂದಿಕೊಳ್ಳುತ್ತಾರೆ. ಈ ಎಲ್ಲಾ ಕಾರಣಗಳಿಂದ ಆರ್ಸಿಬಿ ಗ್ಲೀಸನ್ ಅವರನ್ನು ಆಯ್ಕೆ ಮಾಡಿಕೊಂಡಿದೆ.