ಜೈಪುರ, ಮೇ. 07 (DaijiworldNews/AA): ಐಪಿಎಲ್ 2026ರ ಆವೃತ್ತಿಯಲ್ಲಿ ಮೇ 9ರಂದು ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 'ಪಿಂಕ್ ಪ್ರಾಮೀಸ್ ಮ್ಯಾಚ್' ಆಡಲಿದೆ.

ಮೇ 9 ರಂದು ರಾಜಸ್ಥಾನ್ ರಾಯಲ್ಸ್ ಸಂಪೂರ್ಣ ಗುಲಾಬಿ ಬಣ್ಣದ ವಿಶೇಷ ಜೆರ್ಸಿ ಧರಿಸಿ ಕಣಕ್ಕಿಳಿಯಲಿದೆ. ಈ ಮೂಲಕ ರಾಜಸ್ಥಾನದ ಮಹಿಳೆಯರ ಸಬಲೀಕರಣಕ್ಕೆ ನೆರವಾಗುವ ಉದ್ದೇಶವನ್ನು ಹೊಂದಿದೆ.
ಇದು ಕೇವಲ ಕ್ರೀಡೆಯಾಗಿರದೇ, ಸಮಾಜ ಕಲ್ಯಾಣಕ್ಕಾಗಿ, ಮುಖ್ಯವಾಗಿ ರಾಜಸ್ಥಾನದ ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕಾಗಿ ಕೈಗೊಂಡಿರುವ ಒಂದು ಮಹತ್ವದ ಹೆಜ್ಜೆಯಾಗಿದೆ. ಈ ಪಂದ್ಯದ ಮೂಲಕ ಆರ್ಆರ್ ತಂಡ ರಾಜಸ್ಥಾನದ ಗ್ರಾಮೀಣ ಮಹಿಳೆಯರಿಗೆ ಶಿಕ್ಷಣ, ಆರೋಗ್ಯ ಮತ್ತು ಜೀವನೋಪಾಯದ ಅಗತ್ಯತೆಗಳನ್ನು ನೆರವೇರಿಸುವ 'ರಾಯಲ್ ರಾಜಸ್ಥಾನ್ ಫೌಂಡೇಶನ್'ಗೆ ಬೆಂಬಲ ನೀಡುತ್ತದೆ.
ಪಿಂಕ್ ಪ್ರಾಮಿಸ್ ಅಭಿಯಾನದ ಉದ್ದೇಶ
ರಾಜಸ್ಥಾನ್ ರಾಯಲ್ಸ್ ತಂಡವು ಮಹಿಳಾ ಸಬಲೀಕರಣ ಉದ್ದೇಶದಿಂದ 2024ರಲ್ಲಿ ಈ ಅಭಿಯಾನ ಆರಂಭಿಸಿತ್ತು. ಈ ಪಂದ್ಯದ ಪ್ರತಿ ಟಿಕೆಟ್ ಬೆಲೆಯಲ್ಲಿ 100 ರೂ.ಗಳನ್ನ ಮಹಿಳಾ ಸಬಲೀಕರಣ ಕಾರ್ಯಕ್ಕೆ ಸಮರ್ಪಿಸಲಿದೆ. ಜೊತೆಗೆ ಪಿಂಕ್ ರಾಯಲ್ಸ್ ಜೆರ್ಸಿ ಮಾರಾಟದ ಮೊತ್ತವನ್ನೂ ಇದಕ್ಕೆ ವಿನಿಯೋಗಿಸಲಿದೆ. ಅಷ್ಟೇ ಅಲ್ಲದೇ ರಾಜಸ್ಥಾನ-ಆರ್ಸಿಬಿ ತಂಡಗಳು ಈ ಪಂದ್ಯದಲ್ಲಿ ಸಿಡಿಸುವ ಪ್ರತಿ ಸಿಕ್ಸರ್ಗೆ ರಾಜಸ್ಥಾನದಲ್ಲಿ ಗ್ರಾಮವೊಂದರ ಪ್ರತಿ 6 ಮನೆಗಳಿಗೆ ಸೌರಶಕ್ತಿಯನ್ನು ಫ್ರಾಂಚೈಸಿ ವತಿಯಿಂದ ಒದಗಿಸಲಾಗುತ್ತದೆ.