ಲಕ್ನೋ, ಮೇ. 05 (DaijiworldNews/AA): ಸತತ ಸೋಲುಗಳನ್ನು ಅನುಭವಿಸುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪ್ರದರ್ಶನದ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದು, ಮಾಜಿ ಕ್ರಿಕೆಟಿಗರು ನಾಯಕ ರಿಷಭ್ ಪಂತ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಮುಕ್ತವಾಗಿ ಬ್ಯಾಟಿಂಗ್ ಮಾಡಲು ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.

"ಕಳೆದ ವರ್ಷ ಪಂತ್ ಅವರನ್ನು ಭಾರಿ ಬೆಲೆಗೆ ಖರೀದಿಸಿದ ಲಕ್ನೋ ಆಡಳಿತ ಮಂಡಳಿ, ಅವರನ್ನು ತಮ್ಮ ತಂಡದ ಭವಿಷ್ಯವೆಂದು ಪರಿಗಣಿಸಿತು. ಆದರೆ ಕಳೆದ ವರ್ಷ 14 ಇನ್ನಿಂಗ್ಸ್ಗಳಲ್ಲಿ ಕೇವಲ 269 ರನ್ ಗಳಿಸಿದ್ದ ಪಂತ್, ಈ ಋತುವಿನಲ್ಲಿ 9 ಪಂದ್ಯಗಳಲ್ಲಿ 204 ರನ್ಗಳಿಗೆ ಸೀಮಿತರಾಗಿದ್ದಾರೆ. ಅವರ ಸ್ಟ್ರೈಕ್ ರೇಟ್ (128.30) ತುಂಬಾ ಚಿಂತಾಜನಕವಾಗಿದೆ. ನಾಯಕತ್ವದ ಒತ್ತಡದಿಂದಾಗಿ ಪಂತ್ ತಮ್ಮ ವಿನಾಶಕಾರಿ ಬ್ಯಾಟಿಂಗ್ ಅನ್ನು ಕಳೆದುಕೊಳ್ಳುತ್ತಿದ್ದಾರೆ" ಎಂದು ಮಾಜಿ ಆಟಗಾರರಾದ ರೋಹನ್ ಗವಾಸ್ಕರ್ ತಿಳಿಸಿದ್ದಾರೆ.
"ಪಂತ್ ಒಬ್ಬ ಅದ್ಭುತ ಪ್ರತಿಭೆ ಹೊಂದಿರುವ ಆಟಗಾರ. ಆದರೆ ನಾಯಕತ್ವದ ಹೊರೆ ಅವರನ್ನು ವಿಫಲಗೊಳಿಸುತ್ತಿದೆ. ತಂಡ ಸೋತಾಗ, ಒತ್ತಡ ನಾಯಕನ ಮೇಲೆ ಬೀಳುತ್ತದೆ. ಅದಕ್ಕಾಗಿಯೇ ಅವರನ್ನು ಆ ಜವಾಬ್ದಾರಿಯಿಂದ ಮುಕ್ತಗೊಳಿಸಿ ಬ್ಯಾಟ್ಸ್ಮನ್ ಆಗಿ ಮಾತ್ರ ಆಡಿಸಬೇಕು" ಎಂದಿದ್ದಾರೆ.
ಪಂತ್ರಂತಹ ಅಂತರರಾಷ್ಟ್ರೀಯ ಮಟ್ಟದ ಆಟಗಾರನನ್ನು ನಾವು ಕಳೆದುಕೊಳ್ಳಬಾರದು. ಅವರಿಗೆ ಸ್ವಾತಂತ್ರ್ಯ ನೀಡುವುದು ತಂಡಕ್ಕೆ ಮತ್ತು ಅವರಿಗೆ ಒಳ್ಳೆಯದು. ಪಂತ್ ಅವರನ್ನು ನಾಯಕತ್ವದಿಂದ ತೆಗೆದುಹಾಕಿದರೆ, ದಕ್ಷಿಣ ಆಫ್ರಿಕಾದ ಟಿ20 ನಾಯಕ ಐಡೆನ್ ಮಾರ್ಕ್ರಾಮ್ ಅವರ ಸ್ಥಾನಕ್ಕೆ ಬರಲು ಸಿದ್ಧರಿದ್ದಾರೆ. ಮಾರ್ಕ್ರಾಮ್ ನಾಯಕತ್ವದಲ್ಲಿ ಸನ್ರೈಸರ್ಸ್ ಈಸ್ಟರ್ನ್ ಕೇಪ್ ಸತತ ಎರಡು SA20 ಪ್ರಶಸ್ತಿಗಳನ್ನು ಗೆದ್ದಿದೆ. ವಾಸಿಮ್ ಜಾಫರ್ರಂತಹ ಮಾಜಿ ಆಟಗಾರರು ಕೂಡ ಮಾರ್ಕ್ರಾಮ್ ತುಂಬಾ ಶಾಂತ ಮತ್ತು ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಮಾರ್ಕ್ರಾಮ್ ಅತ್ಯುತ್ತಮ ಟಾಪ್-ಆರ್ಡರ್ ಬ್ಯಾಟ್ಸ್ಮನ್ ಮಾತ್ರವಲ್ಲ, ತಂತ್ರಗಳನ್ನು ಕಾರ್ಯಗತಗೊಳಿಸುವಲ್ಲಿಯೂ ನಿಪುಣರು ಎಂದು ಮನೋಜ್ ತಿವಾರಿ ಅವರು ಸಲಹೆ ನೀಡಿದ್ದಾರೆ.