ಬೆಂಗಳೂರು,ಮಾ. 24 (DaijiworldNews/AK): ಐಪಿಎಲ್ 2025ರ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬರೋಬ್ಬರಿ 1.78 ಬಿಲಿಯನ್ ಡಾಲರ್ (ಸುಮಾರು 16,600 ಕೋಟಿ ರೂ.) ಮೊತ್ತಕ್ಕೆ ಮಾರಾಟವಾಗುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.

ಪ್ರಸ್ತುತ ಮಾಲೀಕರಾದ ಡಿಯಾಜಿಯೊ ( ಸಂಸ್ಥೆಯಿಂದ ಈ ತಂಡವನ್ನು ಪ್ರಮುಖ ಹೂಡಿಕೆದಾರರ ಒಕ್ಕೂಟವು ಖರೀದಿಸಿದೆ. ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬೋಲ್ಟ್ ವೆಂಚರ್ಸ್ ಮತ್ತು ಅಮೆರಿಕದ ಖಾಸಗಿ ಇಕ್ವಿಟಿ ದೈತ್ಯ ಬ್ಲ್ಯಾಕ್ಸ್ಟೋನ್ ಈ ತಂಡವನ್ನು ಜಂಟಿಯಾಗಿ ಖರೀದಿಸಿವೆ.
16,600 ಕೋಟಿ ರೂ. ಮೊತ್ತದ ಈ ಒಪ್ಪಂದವು ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಫ್ರಾಂಚೈಸಿ ಎಂಬ ಹೆಗ್ಗಳಿಕೆಗೆ ಆರ್ಸಿಬಿಯನ್ನು ಪಾತ್ರವಾಗಿಸಿದೆ. ಆರ್ಯಮಾನ್ ವಿಕ್ರಮ್ ಬಿರ್ಲಾ ಅವರು ಈ ಹೊಸ ಮಾಲೀಕತ್ವದ ಅಡಿಯಲ್ಲಿ ತಂಡದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಐಪಿಎಲ್ 2026ರ ಸೀಸನ್ ಮುಗಿದ ನಂತರ ಈ ಹೊಸ ಮಾಲೀಕತ್ವವು ಅಧಿಕೃತವಾಗಿ ಜಾರಿಗೆ ಬರಲಿದೆ. ಅಲ್ಲಿಯವರೆಗೆ ಡಿಯಾಜಿಯೊ ಸಂಸ್ಥೆಯೇ ತಂಡದ ಜವಾಬ್ದಾರಿಯನ್ನು ಮುಂದುವರಿಸಲಿದೆ. ಈ ಒಪ್ಪಂದವು ಕೇವಲ ಪುರುಷರ ತಂಡಕ್ಕೆ ಸೀಮಿತವಾಗಿಲ್ಲ, ಆರ್ಸಿಬಿ ಮಹಿಳಾ ತಂಡವನ್ನೂ ಇದೇ ಒಕ್ಕೂಟವು ತನ್ನ ಖರೀದಿಸಿದೆ.