ಮಂಗಳೂರು,ಮಾ. 22 (DaijiworldNews/TA): ಕರ್ನಾಟಕ ಪವರ್ಲಿಫ್ಟಿಂಗ್ ಅಸೋಸಿಯೇಶನ್ ಆಶ್ರಯದಲ್ಲಿ ಕಶಾರ್ಪ್ ಫಿಟ್ನೆಸ್ ವತಿಯಿಂದ ಮಂಗಳೂರಿನ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಮಾ. 24ರಿಂದ 28ರ ವರೆಗೆ ರಾಷ್ಟ್ರ ಮಟ್ಟದ ಸೀನಿಯರ್ಕ್ಲಾಸ್ಲಿಕ್ ಪವರ್ಲಿಫ್ಟಿಂಗ್ ಚಾಂಪಿಯನ್ ಶಿಪ್ ನಡೆಯಲಿದೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೂಟದ ನಿರ್ದೇಶಕ, ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ಕುದ್ರೋಳಿ, "5 ದಿನಗಳ ಈ ಕೂಟದಲ್ಲಿ ದೇಶದ ವಿವಿಧ ರಾಜ್ಯಗಳಿಂದ 300ಕ್ಕೂ ಅಧಿಕ ಪುರುಷ ಮತ್ತು ಮಹಿಳಾ ಪವರ್ಲಿಫ್ಟರ್ಸ್, 100ಕ್ಕೂ ಹೆಚ್ಚು ತೀರ್ಪುಗಾರರು ಭಾಗವಹಿಸಲಿದ್ದಾರೆ. ಸ್ಕ್ವಾಟ್, ಬೆಂಚ್ ಪ್ರಸ್ ಮತ್ತು ಡೆಡ್ ಲಿಫ್ಟ್ ವಿಭಾಗಗಳಲ್ಲಿ ಕ್ರೀಡಾಪಟುಗಳು ತಮ್ಮ ಸಾಮರ್ಥಯ ಪ್ರದರ್ಶಿಸಲಿದ್ದಾರೆ.
ಮಾ. 24ರಂದು ಉದ್ಘಾಟನೆ ನಡೆಯ ಲಿದ್ದು, ಡಿಸಿ ದರ್ಶನ್ ಎಚ್. ವಿ. ಮುಖ್ಯ ಅತಿಥಿಯಾಗಿರಲಿದ್ದಾರೆ ಎಂದರು. ಅಸೋಸಿಯೇಶನ್ ದ.ಕ. ಜಿಲ್ಲಾಧ್ಯಕ್ಷ ಉಮೇಶ್ ಗಟ್ಟಿ, ಕಾರ್ಯದರ್ಶಿ ಮಧುಚಂದ್ರ ಎಂ., ಕರ್ನಾಟಕ ಪವರ್ಲಿಫ್ಟಿಂಗ್ ಅಸೋಸಿಯೇಶನ್ ಖಜಾಂಚಿ ಜಯರಾಮ ಶೆಟ್ಟಿಗಾರ್ ಮುಂತಾದವರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.