ಅಹಮದಾಬಾದ್, ಫೆ. 12 (DaijiworldNews/TA): ಸೌತ್ ಆಫ್ರಿಕಾ ವಿರುದ್ಧದ ರಣರೋಚಕ ಪಂದ್ಯದಲ್ಲಿ ಅಫ್ಘಾನಿಸ್ತಾನ್ ಬ್ಯಾಟರ್ ರಹಮಾನುಲ್ಲಾ ಗುರ್ಬಾಝ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ. 42 ಎಸೆತಗಳಲ್ಲಿ 7 ಸಿಕ್ಸರ್ ಮತ್ತು 4 ಫೋರ್ ಗಳೊಂದಿಗೆ 84 ರನ್ ಗಳಿಸಿದ ಗುರ್ಬಾಝ್, ಸೂಪರ್ ಓವರ್ನಲ್ಲಿ ಇನ್ನೂ 3 ಸಿಕ್ಸ್ ಸಿಡಿಸಿದರು.

ಈ 10 ಸಿಕ್ಸರ್ ಗಳೊಂದಿಗೆ ಅವರು ಟಿ20 ವಿಶ್ವಕಪ್ನಲ್ಲಿ ಟಾಪ್-5 ಸಿಕ್ಸರ್ ಪಟ್ಟಿಗೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಹಿಂದಿನ ಐದನೇ ಸ್ಥಾನದಲ್ಲಿದ್ದ ಟೀಮ್ ಇಂಡಿಯಾದ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದ್ದಾರೆ. ಕೊಹ್ಲಿ 33 ಇನಿಂಗ್ಸ್ನಲ್ಲಿ ಒಟ್ಟು 35 ಸಿಕ್ಸರ್ ಗಳಿಸಿ ಐದನೇ ಸ್ಥಾನವನ್ನು ಹೊಂದಿದ್ದರು.
ಗುರ್ಬಾಝ್ ಈಗ 18 ಇನಿಂಗ್ಸ್ನಲ್ಲಿ ಒಟ್ಟು 36 ಸಿಕ್ಸರ್ ಗಳೊಂದಿಗೆ ಟಾಪ್-5 ಪಟ್ಟಿಗೆ ಏರಿದ್ದಾರೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ವಿಶ್ವ ದಾಖಲೆ ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ ಹೆಸರಿನಲ್ಲಿ ಇದೆ. ಗೇಲ್ 31 ಇನಿಂಗ್ಸ್ನಲ್ಲಿ 63 ಸಿಕ್ಸರ್ ಗಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಈ ಜಯೋತ್ಸವದಿಂದ ಅಫ್ಘಾನಿಸ್ತಾನ್ ತಂಡದ ಆರಂಭಿಕ ಬ್ಯಾಟಿಂಗ್ ಶಕ್ತಿ ಇನ್ನಷ್ಟು ತೀವ್ರಗೊಳ್ಳಿದೆ ಎಂದು ಅಭಿಮಾನಿಗಳು ಹೇಳಿದ್ದಾರೆ.