ಉಡುಪಿ, ಜ. 28(DaijiworldNews/TA): ಕಲ್ಯಾಣಪುರದ ಮಿಲಾಗ್ರಿಸ್ ಉತ್ಸವ 2026 ರ ಭಾಗವಾಗಿ ಆಯೋಜಿಸಲಾದ ವಾಲಿಬಾಲ್ ಮತ್ತು ಥ್ರೋಬಾಲ್ ಪಂದ್ಯಾವಳಿಗಳಲ್ಲಿ ಟೀಮ್ ಎಲಿವೇಶನ್, ಪಾಂಗಾಳ ಮತ್ತು ಫೆರ್ನಾಂಡಿಸ್ ಫೈಟರ್ಸ್ ತಂಡಗಳು ಕ್ರಮವಾಗಿ ವಿಜೇತರಾಗಿ ಹೊರಹೊಮ್ಮಿದವು.


ವಾಲಿಬಾಲ್ ಮತ್ತು ಥ್ರೋಬಾಲ್ ಸ್ಪರ್ಧೆಗಳನ್ನು ಒಳಗೊಂಡ 'ಮಿಲಾಗ್ರಿಸ್ ಟೂರ್ನಿ 2025–26' ಅನ್ನು ಮಿಲಾಗ್ರಿಸ್ ಕೆಥೆಡ್ರಲ್ ಕಲ್ಯಾಣಪುರ ಇದರ ವಾರ್ಷಿಕ ಹಬ್ಬದ ಪ್ರಮುಖ ಪ್ರಾಯೋಜಕರಾದ ಫೆರ್ನಾಂಡಿಸ್ ಗ್ರೂಪ್ ನ ವಿಲ್ಸನ್ ಮತ್ತು ಲೀನಾ ಫೆರ್ನಾಂಡಿಸ್ ಬೆಂಬಲದೊಂದಿಗೆ ಆಯೋಜಿಸಲಾಗಿತ್ತು. ವಾಲಿಬಾಲ್ ವಿಭಾಗದಲ್ಲಿ, ಮಂಗಳೂರಿನ ಬಿಂಗ್ರಿ ಬಾಯ್ಸ್ ರನ್ನರ್ ಅಪ್ ಸ್ಥಾನ ಪಡೆದರೆ, ಮಿಲಾಗ್ರಿಸ್ ಕಲ್ಯಾಣಪುರ ಎರಡನೇ ರನ್ನರ್ ಅಪ್ ಸ್ಥಾನವನ್ನು ಪಡೆದುಕೊಂಡಿತು. ಥ್ರೋಬಾಲ್ ನಲ್ಲಿ ಕೊಂಕಣ್ ಸ್ಟಾರ್ಸ್ ಮಂಗಳೂರು ರನ್ನರ್ ಅಪ್ ಆಗಿ, ಶಿರ್ವಾ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಮಿಲಾಗ್ರಿಸ್ ಕ್ಯಾಥೆಡ್ರಲ್ ನ ರೆಕ್ಟರ್ ಫಾದರ್ ಫರ್ಡಿನಾಂಡ್ ಗೊನ್ಸಾಲ್ವೆಸ್ ಅವರು ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದರು ಮತ್ತು ವಿಲ್ಸನ್ ಫೆರ್ನಾಂಡಿಸ್ ಮತ್ತು ಸಹಾಯಕ ಧರ್ಮಗುರು ಫಾದರ್ ಪ್ರದೀಪ್ ಕಾರ್ಡೋಜಾ ಅವರು ಬಹುಮಾನಗಳನ್ನು ವಿತರಿಸಿದರು.
ರಾಷ್ಟ್ರೀಯ ಮಟ್ಟದ ಆಟಗಾರ್ತಿಯರಾದ ವಿನೋಲಾ ಡಿ'ಕುನ್ಹಾ ಮತ್ತು ರೋಸ್ವಿತಾ ಅವರಿಗೆ ಅವರ ಕ್ರೀಡಾ ಸಾಧನೆಗಳನ್ನು ಗುರುತಿಸಿ ವಿಶೇಷ ಗೌರವಗಳನ್ನು ನೀಡಲಾಯಿತು. ವಿಲ್ಸನ್ ಫೆರ್ನಾಂಡಿಸ್ ಅವರ ಪತ್ನಿ ಲೀನಾ ಫೆರ್ನಾಂಡಿಸ್ ಪಂದ್ಯಾವಳಿಯನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕಲ್ಯಾಣಪುರದ ಮಿಲಾಗ್ರೆಸ್ ಕ್ಯಾಥೆಡ್ರಲ್ ನ ಸಹಾಯಕ ಧರ್ಮಗುರು ಫಾದರ್ ಪ್ರದೀಪ್ ಕಾರ್ಡೋಜಾ, ಪಾಲನಾ ಸಮಿತಿಯ ಕಾರ್ಯದರ್ಶಿ ಯುಜೀನ್ ರೆಬೆಲ್ಲೊ, 20 ಆಯೋಗಗಳ ಸಂಚಾಲಕಿ ಪ್ರೇಮಾ ಲೂಯಿಸ್ ಮತ್ತು ಇತರರು ಉಪಸ್ಥಿತರಿದ್ದರು.