ಇಸ್ಲಾಮಾಬಾದ್, ಜ. 20 (DaijiworldNews/ AK): 2026ರ ಟಿ20 ವಿಶ್ವಕಪ್ ಪಂದ್ಯಗಳನ್ನಾಡಲು ಭಾರತಕ್ಕೆ ಬರಲ್ಲ ಎಂದು ಹೇಳಿದ ಬಾಂಗ್ಲಾದೇಶಕ್ಕೆ ಈಗ ಪಾಕಿಸ್ತಾನ ಬೆಂಬಲ ನೀಡಿದೆ. ಇದರ ಭಾಗವಾಗಿ ತನ್ನ ರಾಷ್ಟ್ರೀಯ ತಂಡಕ್ಕೆ ಟಿ20 ವಿಶ್ವಕಪ್ ಸಿದ್ಧತೆಗಳನ್ನ ನಿಲ್ಲಿಸುವಂತೆ ಸೂಚಿಸಿದೆ. ಜೊತೆಗೆ ವಿಶ್ವಕಪ್ ಟೂರ್ನಿಯಿಂದಲೇ ಹಿಂದೆ ಸರಿಯುವುದಾಗಿ ಬೆದರಿಕೆ ಹಾಕಿದೆ.

ತನ್ನ ಲೀಗ್ ಪಂದ್ಯಗಳನ್ನ ಭಾರತಕ್ಕೆ ಸ್ಥಳಾಂತರಿಸಬೇಕೆಂಬ ಬಾಂಗ್ಲಾ ಕ್ರಿಕೆಟ್ ಮಂಡಳಿಯ ಬೇಡಿಕೆಯನ್ನ ಈಡೇರಿಸದಿದ್ದರೆ ಟಿ20 ವಿಶ್ವಕಪ್ ಟೂರ್ನಿಯಿಂದ ಹಿಂದೆ ಸರಿಯುವುದಾಗಿ ಪಾಕಿಸ್ತಾನ ಬೆದರಿಕೆ ಹಾಕಿದೆ. ಅದಕ್ಕಾಗಿ ಈಗಾಗಲೇ ಸಿದ್ಧತೆಗಳನ್ನು ನಿಲ್ಲಿಸುವಂತೆ ಕ್ರಿಕೆಟ್ ಮಂಡಳಿ ಪಾಕ್ ತಂಡಕ್ಕೆ ಸೂಚಿಸಿದೆ.
ಪಿಸಿಬಿ ಸೂಚನೆಯಂತೆ ಪಾಕ್ ರಾಷ್ಟ್ರೀಯ ತಂಡದ ಎಲ್ಲಾ ಸಿದ್ಧತೆಗಳನ್ನ ಸ್ಥಗಿತಗೊಳಿಸಲಾಗಿದೆ. ಜೊತೆಗೆ ಶ್ರೀಲಂಕಾದಲ್ಲಿ ಸ್ಥಳಗಳು ಲಭ್ಯವಿಲ್ಲದಿದ್ದರೆ, ಬಾಂಗ್ಲಾದ ಲೀಗ್ ಪಂದ್ಯಗಳನ್ನು ತನ್ನ ದೇಶದಲ್ಲಿ ಆಯೋಜಿಸುವುದಾಗಿಯೂ ಪಾಕ್ ಹೇಳಿದೆ ಎಂದು ವರದಿಯಾಗಿದೆ.
ಬಾಂಗ್ಲಾ ಮತ್ತು ಪಾಕಿಸ್ತಾನ ಸರ್ಕಾರಗಳ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ಪಾಕಿಸ್ತಾನವು ಬಾಂಗ್ಲಾದೇಶದ ನಿರ್ಧಾರವನ್ನ ಸಂಪೂರ್ಣವಾಗಿ ಬೆಂಬಲಿಸುತ್ತಿದೆ. ಬೇರೆಡೆಗೆ ಪಂದ್ಯಗಳನ್ನು ಸ್ಥಳಾಂತರಿಸಬೇಕೆನ್ನುವ ಬಾಂಗ್ಲಾದ ಬೇಡಿಕೆ ಈಡೇರಿಸದಿದ್ದರೆ, ತಾನು ಕೂಡ ವಿಶ್ವಕಪ್ ಟೂರ್ನಿಯಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ.