ವಿಶಾಖಪಟ್ಟಣ, ಡಿ. 07 (DaijiworldNews/TA): ಏಕದಿನ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ಅಪರೂಪದ ವಿಶ್ವ ದಾಖಲೆ ದಾಖಲಿಸಿದ್ದು, ಮತ್ತೊಮ್ಮೆ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ. ಸೌತ್ ಆಫ್ರಿಕಾ ವಿರುದ್ಧ ವಿಶಾಖಪಟ್ಟಣದ ಎಸಿಎ-ವೈಎಸ್ಆರ್ ಸ್ಟೇಡಿಯಂನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೊಹ್ಲಿ, ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಮೈದಾನದಲ್ಲಿ ಹೊಸ ಇತಿಹಾಸ ನಿರ್ಮಿಸಿದರು.

ಕೇವಲ 45 ಎಸೆತಗಳಲ್ಲಿ 3 ಸಿಕ್ಸ್ ಮತ್ತು 6 ಫೋರ್ಗಳೊಂದಿಗೆ ಅಜೇಯ 65 ರನ್ ಬಾರಿಸಿದ ಕೊಹ್ಲಿ, ಮೈದಾನದಲ್ಲಿ ತನ್ನ ಒಟ್ಟು ರನ್ಗಳ ಸಂಖ್ಯೆಯನ್ನು 652ಕ್ಕೆ ಏರಿಸಿದರು. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಮೈದಾನದಲ್ಲಿ 650ಕ್ಕೂ ಹೆಚ್ಚು ರನ್, 100 ಕ್ಕಿಂತ ಹೆಚ್ಚು ಸರಾಸರಿ (108.66) ಮತ್ತು 100 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ (103.49) ಜೊತೆಗೆ ದಾಖಲಾಗಿರುವ ಏಕೈಕ ಬ್ಯಾಟರ್ ಎಂಬ ವಿಶಿಷ್ಟ ಸಾಧನೆ ಅವರಿಗೆ ಸೇರಿದೆ.
ವಿರಾಟ್ ಕೊಹ್ಲಿ ವಿಶಾಖಪಟ್ಟಣದ ಎಸಿಎ ಮೈದಾನದಲ್ಲಿ ಆಡಿದ 8 ಇನಿಂಗ್ಸ್ಗಳಿಂದ ಕಲೆಹಾಕಿರುವುದು ಬರೋಬ್ಬರಿ 652 ರನ್ಗಳು. ಅಂದರೆ ಈ ಮೈದಾನದಲ್ಲಿ ಆಡಿದ ಪಂದ್ಯಗಳಲ್ಲಿ ಕೊಹ್ಲಿ ಕ್ರಮವಾಗಿ 118, 117, 99, 65, 157, 0, 31, 65 ರನ್ಗಳ ಇನಿಂಗ್ಸ್ ಆಡಿದ್ದಾರೆ.ವಿರಾಟ್ ಕೊಹ್ಲಿಯ ಈ ಸಾಧನೆ ಭಾರತ ಕ್ರಿಕೆಟ್ಗೆ ಮತ್ತೊಂದು ಹಿರಿಮೆ ತಂದಿದ್ದು, ಏಕದಿನ ಕ್ರಿಕೆಟ್ನಲ್ಲಿ ಅವರ ಅಪ್ರತಿಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.