ಮುಂಬೈ, ನ. 27 (DaijiworldNews/TA): ಟಿ20 ಕ್ರಿಕೆಟ್ ಇತಿಹಾಸದಲ್ಲಿ ಹೊಸ ವಿಶ್ವ ದಾಖಲೆಯೊಂದು ನಿರ್ಮಾಣವಾಗಿದೆ. ಹೈದರಾಬಾದಿನ ಜಿಮ್ಖಾನ ಮೈದಾನದಲ್ಲಿ ನಡೆದ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಪಂದ್ಯದಲ್ಲಿ ಉರ್ವಿಲ್ ಪಟೇಲ್ ಸ್ಪೋಟಕ ಶತಕ ಬಾರಿಸುವ ಮೂಲಕ ಗಮನ ಸೆಳೆದಿದ್ದಾರೆ. ಸರ್ವಿಸಸ್ ತಂಡ ಮೊದಲು ಬ್ಯಾಟ್ ಮಾಡಿದ್ದು, 20 ಓವರ್ಗಳಲ್ಲಿ 182 ರನ್ ಗಳಿಸಿದ್ದರೆ, ಗುಜರಾತ್ ತಂಡಕ್ಕೆ 183 ರನ್ ಗುರಿ ನೀಡಲಾಗಿತ್ತು.

183 ರನ್ ಗಳ ಗುರಿಯನ್ನು ಬೆನ್ನತ್ತಿದ ಉರ್ವಿಲ್ ಪಟೇಲ್ ಆರಂಭಿಕ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿದರು. ಅವರು ಕೇವಲ 31 ಎಸೆತಗಳಲ್ಲಿ ಶತಕ ಹೊಡೆದು ತಂಡವನ್ನು ತೀವ್ರ ವೇಗದಲ್ಲಿ ಗುರಿ ಮುಟ್ಟಿಸಿದರು. ಈ ಅವಧಿಯಲ್ಲಿ ಉರ್ವಿಲ್ 10 ಸಿಕ್ಸ್ ಮತ್ತು 12 ಫೋರ್ಗಳೊಂದಿಗೆ 37 ಎಸೆತಗಳಲ್ಲಿ 119 ರನ್ ಗಳಿಸಿದರು. ಕೇವಲ 12.3 ಓವರ್ಗಳಲ್ಲಿ ತಂಡ ಗುರಿ ಸಾಧಿಸಿದೆ.
ಈ ಶತಕದೊಂದಿಗೆ ಉರ್ವಿಲ್ ಪಟೇಲ್ ಟಿ20 ಕ್ರಿಕೆಟ್ ಇತಿಹಾಸದಲ್ಲಿ 35 ಕ್ಕಿಂತ ಕಡಿಮೆ ಎಸೆತಗಳಲ್ಲಿ ಎರಡು ಶತಕ ಬಾರಿಸಿದ ಏಕೈಕ ಬ್ಯಾಟ್ಸ್ಮನ್ ಎಂಬ ಖ್ಯಾತಿ ಪಡೆದಿದ್ದಾರೆ. ಅದಕ್ಕೂ ಮುನ್ನ, 2024 ರ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲೇ ಅವರು 28 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಮತ್ತೊಮ್ಮೆ ಅವರು ತಾವೇ ಹಳೆಯ ದಾಖಲೆಯನ್ನು ಮುರಿದು, ಸ್ಪೋಟಕ ಬ್ಯಾಟಿಂಗ್ ಮೂಲಕ ಟಿ20 ಕ್ರಿಕೆಟ್ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.