ಮಂಗಳೂರು, ನ. 24 (DaijiworldNews/TA): ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ 41ನೇ ರಾಜ್ಯ ಮಟ್ಟದ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್ಶಿಪ್ನಲ್ಲಿ ಮಂಗಳೂರು ನಗರದ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿ ಪದಕಗಳ ಮಳೆ ಸುರಿಸಿದ್ದಾರೆ. ಕರ್ನಾಟಕ ರಾಜ್ಯ ಸ್ಕೇಟಿಂಗ್ ಅಸೋಸಿಯೇಷನ್ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಿಂದ ಆಯ್ಕೆಯಾದ 400ಕ್ಕೂ ಅಧಿಕ ಸ್ಕೇಟಿಂಗ್ ಪಟುಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್ನ ಸ್ಕೇಟಿಂಗ್ ಪಟುಗಳಾದ ಯುವರಾಜ್ ಕುಂದರ್ 2 ಚಿನ್ನದ ಪದಕ ಗೆದ್ದುಕೊಂಡರೆ, ತಸ್ಮಯಿ ಶೆಟ್ಟಿ 1ಚಿನ್ನ, 1ಬೆಳ್ಳಿ ಮತ್ತು 1ಕಂಚು, ಹಾನಾ ರೋಸ್ 3 ಬೆಳ್ಳಿ, ಕೃತಿ ಐತಾಲ್ 2ಬೆಳ್ಳಿ ಮತ್ತು 1 ಕಂಚು, ಐಶಾನಿ ಸಂತೋಷ್ 2 ಬೆಳ್ಳಿ, ಗ್ಲಾನಿಯ ಲೋಬೋ 1 ಬೆಳ್ಳಿ, ಶ್ರೇಷ್ಠ ಶೆಣೈ 3 ಕಂಚು, ನಿರ್ಮಯಿ ವೈ ಎನ್ 2 ಕಂಚು ಹಾಗೂ ಧೃತಿ ಅಮಿನ್ 1 ಕಂಚಿನ ಪದಕವನ್ನು ಗೆದ್ದುಕೋಡಿದ್ದಾರೆ .
ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್ನ ಪಟುಗಳು ಕಠಿಣ ಸ್ಪರ್ಧೆಯ ನಡುವೆಯೂ ಒಟ್ಟು 17 ಪದಕಗಳನ್ನು ತಮ್ಮದಾಗಿಸಿಕೊಂಡು ನಗರಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ. ಈ ಯುವ ಪ್ರತಿಭೆಗಳು ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್ನ ತರಬೇತುದಾರರಾದ ಮಹೇಶ್ ಕುಮಾರ್ ಮತ್ತು ಶ್ರವಣ್ ಅವರ ಮಾರ್ಗದರ್ಶನದಲ್ಲಿ ತಯಾರಿ ಪಡೆದು, ರಾಜ್ಯ ಮಟ್ಟದ ವೇದಿಕೆಯಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ವಿಜೇತ ಸ್ಕೇಟಿಂಗ್ ಪಟುಗಳ ವಿವರ :
1 ಯುವರಾಜ್ ಕುಂದರ್ ............. 2 ಚಿನ್ನ ಗೊಂಜಾಗಾ ಸೇಂಟ್ ಅಲೋಶಿಯಸ್ ಶಾಲೆ
2 ತಸ್ಮಯಿ ಎಮ್ ಶೆಟ್ಟಿ .................. 1ಚಿನ್ನ, 1 ಬೆಳ್ಳಿ, 1ಕಂಚು ಶಾರದಾ ವಿದ್ಯಾಲಯ
3 ಕೃತಿ ಎಸ್ ಐತಾಲ್ .................... 2 ಬೆಳ್ಳಿ, 1 ಕಂಚು ಸೇಂಟ್ ಆಗ್ನೆಸ್ ಶಾಲೆ
4 ಹಾನಾ ರೋಸ್ ಪೆರ್ನಾಂಡಿಸ್......... 3 ಬೆಳ್ಳಿ ಸೇಂಟ್ ಅಲೋಶಿಯಸ್ ಉರ್ವ
5 ಐಶಾನಿ ಸಂತೋಷ್........................2 ಬೆಳ್ಳಿ ಕೇಂಬ್ರಿಡ್ಜ್ ಶಾಲೆ
6 ಶ್ರೇಷ್ಠ ಪಿ ಶೆಣೈ ..........................3 ಕಂಚು ಪೋದರ್ ಶಾಲೆ
7 ಗ್ಲಾನಿಯ ಲೋಬೋ.......................1 ಬೆಳ್ಳಿ ಮೌಂಟ್ ಕಾರ್ಮೆಲ್ ಶಾಲೆ
8 ನಿರ್ಮಯಿ ವೈ ಎನ್.......................2 ಕಂಚು ಸೇಂಟ್ ಅಲೋಶಿಯಸ್ ಕಾಲೇಜು
9 ಧೃತಿ ಅಮಿನ್ ........................... 1 ಕಂಚು ನಜುರತ್ ಶಾಲೆ ಬಲ್ಮಟ