ಮುಂಬೈ, ನ. 23 (DaijiworldNews/AA): ಟೀಂ ಇಂಡಿಯಾದ ಪ್ರಮುಖ ಆಟಗಾರ್ತಿ ಸ್ಮೃತಿ ಮಂಧಾನಾ ಅವರ ತಂದೆಗೆ ಲಘು ಹೃದಯಾಘಾತವಾದ ಹಿನ್ನೆಲೆ ಅವರ ವಿವಾಹ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

ಮಂಧಾನಾ ಅವರ ಹುಟ್ಟೂರು ಸಾಂಗ್ಲಿಯಲ್ಲಿ ಇಂದು ಮದುವೆ ಸಮಾರಂಭ ಆಯೋಜನೆಗೊಂಡಿತ್ತು. ಮದುವೆ ಕಾರ್ಯಕ್ರಮ ನಡೆಯುತ್ತಿದ್ದಾಗ ಸ್ಮೃತಿ ಮಂಧಾನಾ ಅವರ ತಂದೆ ಶ್ರೀನಿವಾಸ್ ಅವರಿಗೆ ಲಘು ಹೃದಯಾಘಾತವಾಗಿದೆ.
ಅನಾರೋಗ್ಯಕ್ಕೆ ಒಳಗಾದ ಬೆನ್ನಲ್ಲೇ ಕಾರ್ಯಕ್ರಮ ನಡೆಯುತ್ತಿದ್ದ ಜಾಗಕ್ಕೆ ಅಂಬುಲೆನ್ಸ್ ಬಂದಿದ್ದು, ಶ್ರೀನಿವಾಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.