ದುಬೈ, ಸೆ. 01 (DaijiworldNews/AA): ಇದೇ ಸೆಪ್ಟೆಂಬರ್ 30 ರಿಂದ ನವೆಂಬರ್ 2ರ ವರೆಗೆ ನಡೆಯಲಿರುವ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ದಾಖಲೆಯ 122.56 ಕೋಟಿ ರೂ. ಮೊತ್ತದ ಬಹುಮಾನ ಘೋಷಿಸಿದೆ. ಇದು ಈವರೆಗಿನ ಬಹುಮಾನಕ್ಕಿಂತ 297% ಹೆಚ್ಚಳವಾದೆ ಎಂದು ಐಸಿಸಿ ಅಧ್ಯಕ್ಷ ಜಯ್ ಶಾ ತಿಳಿಸಿದ್ದಾರೆ.

ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ವಿಶ್ವಕಪ್ ಬಹುಮಾನದ ಒಟ್ಟು ಮೊತ್ತವನ್ನು 13.88 ಮಿಲಿಯನ್ ಅಂದ್ರೆ ಸರಿಸುಮಾರು 122.55 ಕೋಟಿ ರೂ. ಗಳಿಗೆ ಹೆಚ್ಚಿಸಲಾಗಿದೆ. ಈ ಪೈಕಿ ಪ್ರಶಸ್ತಿ ವಿಜೇಯರಿಗೆ 29.50 ಕೋಟಿ, ರನ್ನರ್ ಅಪ್ಗೆ 19.75 ಕೋಟಿ ಹಾಗೂ ಸೆಮಿಫೈನಲಿಸ್ಟ್ಗೆ 9.89 ಕೋಟಿ ರೂ. ಬಹುಮಾನ ನೀಡುವುದಾಗಿ ಮಾಹಿತಿ ಹಂಚಿಕೊAಡಿದ್ದಾರೆ.
ಯಾರಿಗೆ ಎಷ್ಟು ಬಹುಮಾನ?
ವಿಜೇತ ತಂಡಕ್ಕೆ- 39.50 ಕೋಟಿ ರೂ. (4.58 ದಶಲಕ್ಷ ಡಾಲರ್), ರನ್ನರ್ ಅಪ್ ತಂಡಕ್ಕೆ 19.75 ಕೋಟಿ ರೂ. (2.24 ದಶಲಕ್ಷ ಡಾಲರ್), ಸೆಮಿ ಫೈನಲ್ ತಲುಪುವ ತಂಡಕ್ಕೆ – 9.89 ಕೋಟಿ ರೂ. (1.12 ದಶಲಕ್ಷ ಡಾಲರ್), 5 & 6ನೇ ಸ್ಥಾನ ಪಡೆದ ತಂಡಕ್ಕೆ – 6.17 ಕೋಟಿ ರೂ. (7,00,000 ಡಾಲರ್), ಗುಂಪು ಹಂತದಲ್ಲಿ ಗೆದ್ದ ತಂಡಕ್ಕೆ – 30.25 ಲಕ್ಷ ರೂ. (34,314 ಡಾಲರ್), 7-8ನೇ ಸ್ಥಾನ ಪಡೆದ ತಂಡಕ್ಕೆ – 2.46 ಕೋಟಿ ರೂ. (2,80,000 ಡಾಲರ್), ಯಾವುದೇ ಪಂದ್ಯ ಗೆದ್ದರೂ, ಗೆಲ್ಲದಿದ್ದರೂ ಪ್ರತಿ ತಂಡಕ್ಕೆ - 2.20 ಕೋಟಿ ರೂ. (2,50,000 ಡಾಲರ್) ಬಹುಮಾನ ಘೋಷಿಸಲಾಗಿದೆ.