ಕರಾಚಿ, ಮೇ. 23 (DaijiworldNews/AA): ಭಾರತದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಿಂದಾಗಿ ಸ್ಥಗಿತಗೊಂಡಿದ್ದ ಪಾಕಿಸ್ತಾನ ಸೂಪರ್ ಲೀಗ್ ಮೇ 17 ರಿಂದ ಪುನಾರಂಭಗೊಂಡಿದ್ದರೂ ಪಂದ್ಯಗಳಲ್ಲಿ ತೀರ್ಪು ಮರು ಪರಿಶೀಲನಾ(ಡಿಆರ್ಎಸ್) ನಿಯಮವನ್ನು ಕೈಬಿಟ್ಟಿದೆ.

ಡಿಆರ್ಎಸ್ಗೆ ಅಗತ್ಯವಿರುವ ಹಾಕ್ಐ ಬಳಸಲು ತಿಳಿದಿರುವ ತಂತ್ರಜ್ಞರು ಪಾಕಿಸ್ತಾನದಲ್ಲಿ ಇಲ್ಲದ ಕಾರಣ ಈ ನಿಯಮನ್ನೇ ಕೈಬಿಡಲಾಗಿದೆ. ಟೂರ್ನಿ ಸ್ಥಗಿತಗೊಂಡ ಹಿನ್ನೆಲೆ ಹಾಕ್ಐ ತಂಡದ ಸದಸ್ಯರು ತಮ್ಮ ತಮ್ಮ ದೇಶಕ್ಕೆ ವಾಪಾಸ್ಸಾಗಿದ್ದಾರೆ.
ಪಿಎಸ್ಎಲ್ ಆರಂಭಗೊಂಡಿದ್ದರೂ ಹಾಕ್ಐ ತಂತ್ರಜ್ಞರು ಪಾಕಿಸ್ತಾನಕ್ಕೆ ಮರಳಲು ಹಿಂದೇಟು ಹಾಕಿದ್ದಾರೆ. ಪಾಕ್ನಲ್ಲಿ ಬೇರೆ ಯಾರಿಗೂ ಡಿಆರ್ಎಸ್ ಬಳಕೆಯ ಬಗ್ಗೆ ಗೊತ್ತಿರದ ಹಿನ್ನೆಲೆ ಈ ನಿಯಮವನ್ನೇ ಟೂರ್ನಿಯಿಂದ ಕೈಬಿಡಲಾಗಿದೆ. ಹೀಗಾಗಿ ಅಂಪೈರ್ ನಿರ್ಧಾರವೇ ಅಂತಿಮವಾಗಿದ್ದು ಮರು ಪರಿಶೀಲನೆಗೆ ಆಟಗಾರರಿಗೆ ಅವಕಾಶವಿಲ್ಲ.
ಪಿಎಸ್ಎಲ್ನ ಡಿಆರ್ಎಸ್ ಮತ್ತು ಹಾಕ್-ಐ ತಂತ್ರಜ್ಞಾನಗಳನ್ನು ನಿರ್ವಹಿಸುತ್ತಿದ್ದವರ ಪೈಕಿ ಹೆಚ್ಚಿನ ತಂತ್ರಜ್ಞರು ಭಾರತದವರೇ ಆಗಿದ್ದಾರೆ ಎಂದು ವರದಿಯಾಗಿದೆ. ಪಿಎಸ್ಎಲ್ನ ಕೊನೆಯ ಕೆಲವು ಪಂದ್ಯಗಳು ಡಿಆರ್ಎಸ್ ಇಲ್ಲದೇ ಪೂರ್ಣಗೊಳ್ಳುವ ಕಾರಣ ತಂಡಗಳಿಗೆ ಹಿನ್ನಡೆಯುಂಟಾಗಲಿದೆ.