ದೆಹಲಿ, ಏ.30 (DaijiworldNews/AA): ಇತ್ತೀಚೆಗಷ್ಟೇ ಬಿಸಿಸಿಐ ಐಪಿಎಲ್ನಲ್ಲಿ ರೋಬೋ ಶ್ವಾನ ಪರಿಚಯಿಸಲಾಗಿತ್ತು. ಐಪಿಎಲ್ ಪಂದ್ಯಗಳ ಟಾಸ್ ಸಮಯದಲ್ಲಿ ಬಳಸಲಾಗುವ ಈ ಶ್ವಾನಕ್ಕೆ ಕೆಲ ದಿನಗಳ ಹಿಂದೆ ಚಂಪಕ್ ಎಂದು ಹೆಸರಿಡಲಾಗಿತ್ತು. ಇದೀಗ ಈ ಹೆಸರೇ ಬಿಸಿಸಿಐಗೆ ಒಂದು ಕಂಟಕವಾಗಿ ಪರಿಣಮಿಸಿದ್ದು, ಇದರ ವಿರುದ್ಧ ಬಿಸಿಸಿಐಗೆ ದೆಹಲಿ ಹೈಕೋರ್ಟ್ನಿಂದ ನೋಟಿಸ್ ಕಳುಹಿಸಲಾಗಿದೆ.

ದೆಹಲಿ ಹೈಕೋರ್ಟ್ ಬಿಸಿಸಿಐಗೆ ನೋಟಿಸ್ ಕಳುಹಿಸಿದೆ. ವಾಸ್ತವವಾಗಿ, ಪ್ರಸಿದ್ಧ ಮಕ್ಕಳ ನಿಯತಕಾಲಿಕೆಯ ಹೆಸರು ಕೂಡ ಚಂಪಕ್ ಆಗಿದ್ದು, ಅದಕ್ಕಾಗಿಯೇ ಈ ಕಂಪನಿಯು ಬಿಸಿಸಿಐ ವಿರುದ್ಧ ಕೋರ್ಟ್ ಮೊರೆಹೋಗಿದೆ. ಬಿಸಿಸಿಐ ತನ್ನ ರೋಬೋ ಶ್ವಾನಕ್ಕೆ ಚಂಪಕ್ ಎಂದು ಹೆಸರಿಡುವ ಮೂಲಕ ನೋಂದಾಯಿತ ಟ್ರೇಡ್ಮಾರ್ಕ್ ಅನ್ನು ಉಲ್ಲಂಘಿಸಿದೆ ಎಂದು ನಿಯತಕಾಲಿಕೆಯ ಆಡಳಿತ ಮಂಡಳಿ ಆರೋಪಿಸಿದೆ.
ದೂರಿನನ್ವಯ ದೆಹಲಿ ಕೋರ್ಟ್ ಬಿಸಿಸಿಐಗೆ ನೋಟಿಸ್ ಕಳುಹಿಸಿದ್ದು, ರೋಬೋ ಶ್ವಾನಕ್ಕೆ ಚಂಪಕ್ ಎಂದು ಹೆಸರಿಟ್ಟಿರುವ ಬಗ್ಗೆ ಉತ್ತರ ಕೇಳಿದೆ. ಜೊತೆಗೆ ಮುಂದಿನ ನಾಲ್ಕು ವಾರಗಳಲ್ಲಿ ಬಿಸಿಸಿಐ ತನ್ನ ಲಿಖಿತ ಉತ್ತರವನ್ನು ನೀಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆಯು ಜುಲೈ 9 ರಂದು ನಡೆಯಲಿದೆ.