ನವದೆಹಲಿ, ಮೇ 09 (Daijiworld News/MSP): ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸಲು ಆಗ್ರಹಿಸಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಬಿಎಸ್ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಸಲ್ಲಿಸಿದ್ದ ನಾಮಪತ್ರವನ್ನ ಚುನಾವಣಾ ಆಯೋಗ ಅಮಾನ್ಯಗೊಳಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಮೇ 06 ರಂದು ಅರ್ಜಿ ಸಲ್ಲಿಸಿದ್ದರು. ಇಂದು ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್, ಮಾಜಿ ಯೋಧ ತೇಜ್ ಬಹದ್ದೂರ್ ಅರ್ಜಿಯನ್ನು ವಜಾಗೊಳಿಸಿದೆ.

ಚೀಫ್ ಜಸ್ಟೀಸ್ ಗೊಗೋಯ್ ಅವರಿದ್ದ ನ್ಯಾಯಪೀಠ ತೇಜ್ ಬಹದ್ದೂರ್ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ ಎಂದು ತಿಳಿಸಿ, ಅರ್ಜಿಯನ್ನು ವಜಾಗೊಳಿಸಿತು.
ಸರ್ಕಾರಿ ನೌಕರರೊಬ್ಬರು ಸೇವೆಯಿಂದ ವಜಾಗೊಂಡಿದ್ದರೆ ಅದಕ್ಕೆ ಕಾರಣವನ್ನು ಚುನಾವಣಾ ಆಯೋಗಕ್ಕೆ ನೀಡಬೇಕಾಗುತ್ತದೆ ಆದರೆ ತೇಜ್ ಬಹದ್ದೂರ್ ನಾಮಪತ್ರ ಸಲ್ಲಿಸುವಾಗ ಈ ದಾಖಲೆಯನ್ನು ಸಲ್ಲಿಸಿರಲಿಲ್ಲ.