ನವದೆಹಲಿ,ಜ.29 (DaijiworldNews/HR): "ಪ್ರಧಾನಿ ನರೇಂದ್ರ ಮೋದಿಯವರು ರೈತರ ಮೇಲೆ ದಾಳಿ ಮಾಡುವ ಮೂಲಕ ಇಡೀ ಭಾರತವನ್ನೇ ದುರ್ಬಲಗೊಳಿಸುತ್ತಿದ್ದಾರೆ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ವರು, "ಪ್ರಧಾನಿ ನರೇಂದ್ರ ಮೋದಿಯವರು ರೈತರು ಹಾಗೂ ಕಾರ್ಮಿಕರ ಮೇಲೆ ದಾಳಿ ಮಾಡಿ ಇಡೀ ದೇಶವನ್ನು ದುರ್ಬಲಗೊಳಿಸುತ್ತಿದ್ದಾರೆ. ಇದರಿಂದ ದೇಶವಿರೋಧಿ ಶಕ್ತಿಗಳಿಗೆ ಲಾಭವಾಗಲಿದೆ" ಎಂದು ಹೇಳಿದ್ದಾರೆ.
ಈ ಕುರಿತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡಾ ಟ್ವೀಟ್ ಮಾಡಿದ್ದು, "ರೈತರ ನಂಬಿಕೆ ದೇಶದ ರಾಜಧಾನಿ. ಅವರ ನಂಬಿಕೆಯನ್ನು ಮುರಿಯುವುದು ಅಪರಾಧ. ಅವರ ಧ್ವನಿಯನ್ನು ಆಲಿಸದಿರುವುದು ಪಾಪ. ರೈತರ ಮೇಲಿನ ದಾಳಿ ದೇಶದ ಮೇಲಿನ ದಾಳಿಯಾಗಿದೆ" ಎಂದು ಹೇಳಿದ್ದಾರೆ.