ನವದೆಹಲಿ, ಜ.26 (DaijiworldNews/PY): ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆಯಲ್ಲಿ ಕುಸಿತ ಕಂಡರೂ ಕೂಡಾ ಮಂಗಳವಾರ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮತ್ತಷ್ಟು ಏರಿಕೆಯಾಗಿದೆ.

ಸಾಂದರ್ಭಿಕ ಚಿತ್ರ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 35 ಪೈಸೆ ಹೆಚ್ಚಳವಾಗಿದ್ದು 86.05 ರೂ. ತಲುಪಿದೆ. ಅದೇ ರೀತಿ ಡೀಸೆಲ್ ಕೂಡ 35 ಪೈಸೆ ಹೆಚ್ಚಳವಾಗಿದ್ದು 76.23 ರೂಪಾಯಿಗೆ ತಲುಪಿದೆ.
ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ ರೂ. 88.95ಕ್ಕೆ ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ ರೂ.80.84ಕ್ಕೆ ತಲುಪಿದೆ.
ಮುಂಬೈಯಲ್ಲಿ ಪೆಟ್ರೋಲ್ ದರ 92.62 ರೂ. ಆಗಿದ್ದು, ಡೀಸೆಲ್ 83.03 ರೂ.ಏರಿಕೆಯಾಗಿದೆ. ಚೆನ್ನೈಯಲ್ಲಿ ಪೆಟ್ರೋಲ್ 88.60 ರೂ. ಇದ್ದರೆ, ಡೀಸೆಲ್ 81.47 ರೂ. ಆಗಿದೆ. ಇನ್ನು ಕೋಲ್ಕತಾದಲ್ಲಿ ಪೆಟ್ರೋಲ್ 87.45 ರೂ ಏರಿಕೆಯಾದರೆ, ಡೀಸೆಲ್ ದರ 79.83 ರೂ ಹೆಚ್ಚಳವಾಗಿದೆ.
ಅಂತರಾಷ್ಟ್ರೀಯ ಬೆಲೆ ಹಾಗೂ ವಿದೇಶಿ ವಿನಿಮಯ ದರಗಳಿಗೆ ಅನುಗುಣವಾಗಿ ಪ್ರತಿದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಪರಿಷ್ಕರಿಸಲಾಗುತ್ತಿದೆ.