ಬೆಂಗಳೂರು, ಜ.25 (DaijiworldNews/MB) : ಬಿಗ್ಬಾಸ್ ಖ್ಯಾತಿಯ ಜಯಶ್ರೀ ರಾಮಯ್ಯ ನಗರದ ಕಡಬಗೆರೆ ಕ್ರಾಸ್ ಜನಪ್ರಿಯ ಬಳಿಯ ಪ್ರಗತಿ ಲೇಔಟ್ನ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಈ ಹಿಂದೆ ಫೇಸ್ಬುಕ್ನಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದರು. ಬಳಿಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಜಯಶ್ರೀ ರಾಮಯ್ಯಗೆ ನಟ ಸುದೀಪ್ ಸೇರಿ ಹಲವರು ಸಮಾಧಾನ ಹೇಳಿದ್ದರು. ಬಳಿಕ ನಾನು ಈಗ ಸುರಕ್ಷಿತಳಾಗಿದ್ದೇನೆ, ಲವ್ ಯೂ ಆಲ್ ಎಂದು ಜಯಶ್ರೀ ಹೇಳಿದ್ದರು.
ಆದರೆ ರವಿವಾರ ತಡರಾತ್ರಿ ಅವರು ನೇಣಿಗೆ ಶರಣಾಗಿರುವ ವಿಚಾರ ಸೋಮವಾರ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.
ತೀರಾ ಖಿನ್ನತೆಗೆ ಒಳಗಾಗಿದ್ದ ಜಯಶ್ರೀ ಈ ಹಿಂದೆ ತನಗೆ ಸಾಯಲು ಬಿಡಿ ಅಂತ ಅಳಲು ತೋಡಿಕೊಂಡಿದ್ದರು. ಕುಟುಂಬದ ಸಮಸ್ಯೆಯಿದೆ. ಜೀವನದಲ್ಲಿ ನಡೆಯಬಾರದ ಘಟನೆಗಳು ಘಟಿಸಿದೆ. ದಯವಿಟ್ಟು ನನಗೆ ದಯಾ ಮರಣ ಕರುಣಿಸಿ ಎಂದು ಮನವಿ ಮಾಡಿಕೊಂಡಿದ್ದರು.