ಬೆಂಗಳೂರು, ಜೂ. 29 (DaijiworldNews/MB) : ಭಾನುವಾರದಂದು ಬ್ರೇಕ್ ಆಗಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮತ್ತೆ ಏರುಗತಿಯಲ್ಲಿ ಸಾಗಿದೆ. ಸತತ 21 ದಿನಗಳ ಕಾಲ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳವಾಗಿದ್ದು ಭಾನುವಾರ ಒಂದು ದಿನ ಏರಿಕೆಯಾಗದೆ ಜನರಿಗೆ ಕೊಂಚ ರಿಲೀಫ್ ನೀಡಿತ್ತು. ಆದರೆ ಸೋಮವಾರ ಮತ್ತೆ ತೈಲ ಬೆಲೆ ಪರಿಷ್ಕರಣೆಯಾಗಿದ್ದು ಪೆಟ್ರೋಲ್ ಲೀಟರ್ಗೆ 0.05 ಹಾಗೂ ಡೀಸೆಲ್ ಲೀಟರ್ಗೆ 0.13ರಷ್ಟು ದರ ಹೆಚ್ಚಳವಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ಗೆ 80.43 ರೂ. ಹಾಗೂ ಪ್ರತಿ ಲೀಟರ್ ಡೀಸೆಲ್ಗೆ 80.53 ರೂ. ಆಗಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ಗೆ 83.02 ಮತ್ತು ಡೀಸೆಲ್ಗೆ 76.56 ಗೆ ಏರಿದೆ.
2017ರ ಮೇ ನಿಂದ ಪ್ರತಿ ದಿನ ದರ ಪರಿಷ್ಕರಣೆ ಕ್ರಮ ಅನುಸರಿಸಲಾಗುತ್ತಿದ್ದು ಜೂನ್ 7 ರಿಂದ ಪೆಟ್ರೋಲ್ ಡಿಸೇಲ್ ದರ ಏರಿಕೆಯಾಗಿದ್ದು ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್ಗೆ 10 ರೂ. ಯಷ್ಟು ಹೆಚ್ಚಳ ಕಂಡಿದೆ.
ಇನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೈಲಕ್ಕೆ ನಿಗಧಿ ಪಡಿಸಿರುವ ಸುಂಕ ವಿಶ್ವದಲ್ಲೇ ಅಧಿಕ ಪ್ರಮಾಣದ ತೆರಿಗೆಯಾಗಿದೆ ಎಂದು ವರದಿಗಳು ತಿಳಿಸಿದೆ.