ನವದೆಹಲಿ, ಜೂ.20 (DaijiworldNews/MB) : ಯಾರೂ ಕೂಡಾ ಭಾರತದ ಗಡಿಯೊಳಗೆ ನುಸುಳಿಲ್ಲ ಹಾಗೂ ಯಾವುದೇ ಪೋಸ್ಟ್ ಅನ್ನು ವಶಪಡಿಸಿಕೊಂಡಿಲ್ಲ. ಯಾವುದೇ ಅಗತ್ಯ ಹೆಜ್ಜೆ ಇಡಲು ನಮ್ಮ ಸಶಸ್ತ್ರ ಪಡೆಗೆ ಸ್ವಾತಂತ್ರ್ಯ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಸರ್ವಪಕ್ಷ ಸಭೆಗೆ ತಿಳಿಸಿದ್ದಾರೆ.

ಚೀನಾ - ಭಾರತ ಗಡಿ ಸಂಘರ್ಷದಲ್ಲಿ ಭಾರತೀಯ ಯೋಧರು ಹುತಾತ್ಮರಾದ ಬೆನ್ನಲ್ಲೇ ಶುಕ್ರವಾರ ಕರೆಯಲಾದ ವರ್ಚುಯಲ್ ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು, ಲಡಾಖ್ನಲ್ಲಿ ಚೀನಾ ನಡೆಸಿದ ಕೃತ್ಯದಿಂದಾಗಿ ಇಡೀ ದೇಶಕ್ಕೆ ನೋವಾಗಿದ್ದು ಆಕ್ರೋಶ ಉಂಟಾಗಿದೆ. ನಮ್ಮ ಭೂಮಿ ರಕ್ಷಿಸಲು ಮಾಡಬೇಕಾದ ಕರ್ತವ್ಯವನ್ನು ಸಶ್ತ್ರ ಪಡೆಗಳು ಮಾಡಲಿದ್ದು ಎಲ್ಲಾ ಸ್ವಾತಂತ್ಯ್ರವನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಯಾರೂ ಕೂಡಾ ಭಾರತದ ಗಡಿಯೊಳಗೆ ನುಸುಳಿಲ್ಲ ಹಾಗೂ ಯಾವುದೇ ಪೋಸ್ಟ್ ಅನ್ನು ವಶಪಡಿಸಿಕೊಂಡಿಲ್ಲ. ನಮ್ಮ ಭೂಮಿಯ ಒಂದು ಇಂಚಿನ ಮೇಲೆಯೂ ಕಣ್ಣಿಡುವ ಸಾಮರ್ಥ್ಯ ಯಾರಿಗೂ ಇಲ್ಲ. ಹಾಗೆ ಮಾಡಲು ಸಾಮರ್ಥ್ಯ ನಮ್ಮಲಿದೆ. ಒಂದೇ ಸಮಯದಲ್ಲಿ ಹಲವು ಕಡೆಗಳಿಗೆ ದಾಳಿ ಮಾಡಬಲ್ಲ ಸಾಮರ್ಥ್ಯ ಭಾರತಕ್ಕೆ ಇದೆ ಎಂದು ಚೀನಾಗೆ ಮೋದಿ ಎಚ್ಚರಿಕೆ ನೀಡಿದರು.
ಹಾಗೆಯೇ ಗಡಿಯಲ್ಲಿ ನಮ್ಮ ಭೂಮಿ ರಕ್ಷಿಸುವ ಹಲವು ವರ್ಷಗಳಿಂದ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು ನಮ್ಮ ಸಶಸ್ತ್ರ ಪಡೆಗಳಿಗೆ, ಯುದ್ಧವಿಮಾನಗಳಿಗೆ, ಅತ್ಯಾಧುನಿಕ ಹೆಲಿಕಾಪ್ಟರ್ಗಳಿಗೆ ಹಾಗೂ ಕ್ಷಿಪಣಿ ವ್ಯವಸ್ಥೆಗಳ ಅಗತ್ಯಕ್ಕೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ಭಾರತ ಶಾಂತಿ ಮತ್ತು ಸ್ನೇಹವನ್ನು ಬಯಸುವ ದೇಶವಾಗಿದೆ. ಆದರೆ ಸಾರ್ವಭೌಮತ್ವವು ಸರ್ವೋಚ್ಚವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.