ನವದೆಹಲಿ , ಮಾ.14 (DaijiworldNews/PY) : ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾದ ವಿನಯ್ ಶರ್ಮಾ ಮತ್ತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾನೆ.

ರಾಷ್ಟ್ರಪತಿ ಭವನದಿಂದ ತನ್ನ ಕ್ಷಮಾಧಾನ ಅರ್ಜಿ ತಿರಸ್ಕರಿಸುವಲ್ಲಿ ಪ್ರಕ್ರಿಯಾ ಲೋಪ ಮತ್ತು ಸಂವಿಧಾನಿಕ ಅಕ್ರಮ ಎಸಗಲಾಗಿದೆ ಎಂದು ವಿನಯ್ ಶರ್ಮಾ ತಿಳಿಸಿದ್ದಾನೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್ಗೆ ಕೆಲವು ದಿನಗಳ ಹಿಂದೆ ಅರ್ಜಿ ಸಲ್ಲಿಸಿರುವ ವಿನಯ್ ಶರ್ಮಾ, ಗಲ್ಲುಶಿಕ್ಷೆಯನ್ನು ಜೀವಾವಧಿಗೆ ಇಳಿಸುವಂತೆ ಮನವಿ ಮಾಡಿದ್ಧಾನೆ. ಮಾ.20 ನಾಲ್ಕು ಅಪರಾಧಿಗಳನ್ನು ಗಲ್ಲಿಗೇರಿಸುವಂತೆ ವಿಚಾರಣಾ ನ್ಯಾಯಾಲಯ ಮಾ.5ರಂದು ಹೊಸ ಡೆತ್ ವಾರಂಟ್ ಹೊರಡಿಸಿದೆ.