ಭೋಪಾಲ್, ಮಾ. 12 (Daijiworld News/MB) : ಪ್ರಸ್ತುತ ಬಿಜೆಪಿ ಸೇರಿರುವ ಜ್ಯೋತಿರಾಧಿತ್ಯ ಸಿಂಧಿಯಾಗೆ ಡಿಸಿಎಂ ಆಗುವ ಆಫರ್ ನೀಡಲಾಗಿತ್ತು ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಹೇಳಿದ್ದಾರೆ.

ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, "ಜ್ಯೋತಿರಾಧಿತ್ಯ ಸಿಂಧಿಯಾಗೆ ಡಿಸಿಎಂ ಆಗುವ ಆಫರ್ ನೀಡಲಾಗಿತ್ತು. ಆದರೆ ಅವರು ತಮ್ಮ ಬೆಂಬಲಿಗನೊಬ್ಬನೆಗೆ ಆ ಹುದ್ದೆ ನೀಡಬೇಕೆಂದು ಹೇಳಿದ್ದ ಕಾರಣದಿಂದಾಗಿ ಮುಖ್ಯಮಂತ್ರಿ ಕಮಲ್ನಾಥ್ ಅದನ್ನು ಒಪ್ಪಲಿಲ್ಲ ಎಂದು ಹೇಳಿದ್ದಾರೆ.
ಸಿಂಧಿಯಾ ಕಾಂಗ್ರೆಸ್ ತೊರೆದ ಬೆನ್ನಲ್ಲೇ ಶಾಸಕತ್ವ ತೊರೆದಿದ್ದ ಕಾಂಗ್ರೆಸ್ನ 22 ನಾಯಕರಲ್ಲಿ 13 ನಾಯಕರು ಪಕ್ಷ ತೊರೆಯಲು ಸಿದ್ಧರಿಲ್ಲ. ಜ್ಯೋತಿರಾಧಿತ್ಯರಿಗೆ ರಾಜ್ಯ ಸಭಾ ಟಿಕೆಟ್ ಕೊಡುವ ಉದ್ದೇಶದಿಂದ ಪಕ್ಷದ ಮೇಲೆ ಒತ್ತಡ ಹೇರಲು ಅವರು ರಾಜೀನಾಮೆ ಸಲ್ಲಿಸಿದ್ದರು ಎಂದು ತಿಳಿಸಿದ್ದಾರೆ.
2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರೆ ಉಪಮುಖ್ಯಮಂತ್ರಿ ಹುದ್ದೆಯ ಆಫರ್ ಅನ್ನು ಕಾಂಗ್ರೆಸ್ ಹೈಕಮಾಂಡ್, ಸಿಂಧಿಯಾಗೆ ನೀಡಿತ್ತು. ಆದರೆ, ಡಿಸಿಎಂ ಹುದ್ದೆಯಲ್ಲಿ ತಾವು ಸೂಚಿಸುವ ವ್ಯಕ್ತಿಯನ್ನು ಕೂರಿಸಬೇಕೆಂದು ಸಿಂಧಿಯಾ ಪಟ್ಟು ಹಿಡಿದರು. ನಾಯಕರೊಬ್ಬರ ‘ಚೇಲಾ’ ಆಗಿರುವ ವ್ಯಕ್ತಿಯೊಬ್ಬ ಆ ಸ್ಥಾನದಲ್ಲಿ ಕುಳಿತುಕೊಳ್ಳುವುದನ್ನು ಕಮಲ್ನಾಥ್ ಒಪ್ಪಲಿಲ್ಲ. ಆದರೂ, ಸಿಂಧಿಯಾರ ಆಪ್ತರಾಗಿದ್ದ ಆರು ಶಾಸಕರನ್ನು ಕಮಲ್ನಾಥ್ ಸಂಪುಟಕ್ಕೆ ಸೇರಿಸಿಕೊಂಡರು ಎಂದು ಹೇಳಿದ್ದಾರೆ.