ನವದೆಹಲಿ, ಮಾ.06 (DaijiworldNews/PY) : "ಮೋದಿ ಅವರ ವಿಚಾರಗಳು ದೇಶದ ಆರ್ಥಿಕತೆಯನ್ನೇ ನಾಶ ಪಡಿಸುತ್ತಿದೆ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ಧಾರೆ.

ಯೆಸ್ ಬ್ಯಾಂಕ್ ಬಿಕ್ಕಟ್ಟಿನ ವಿಚಾರವಾಗಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಅವರು, "ಬ್ಯಾಂಕ್ ಹೆಸರಿನಲ್ಲಿರುವ ಯೆಸ್ ಪದವನ್ನೇ ಲೇವಡಿ ಮಾಡಿದ್ದು, ನೋ ಯೆಸ್ ಬ್ಯಾಂಕ್. ಮೋದಿ ಹಾಗೂ ಅವರ ವಿಚಾರಗಳು ದೇಶದ ಆರ್ಥಿಕತೆಯನ್ನು ನಾಶ ಪಡಿಸುತ್ತಿದೆ" ಎಂದು ಹೇಳಿದ್ದಾರೆ.
ರಾಹುಲ್ ಅವರ ಟ್ವೀಟ್ಗೆ ಕಾಮೆಂಟ್ ಮಾಡಿದ ಹಲವರು, ಯೆಸ್ ಬ್ಯಾಂಕ್ನ ಆಡಳಿತ ವಿದ್ಯಾಮಾನಗಳನ್ನು ಸರಿಯಾಗಿ ವರದಿ ಮಾಡದೇ ಮುಚ್ಚಿಟ್ಟ ಮಾಧ್ಯಮಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಮತ್ತೋರ್ವ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು, "ಇದು ಬಿಜೆಪಿ ಆಡಳಿತ ಸಾಮರ್ಥ್ಯಕ್ಕೆ ನಿದರ್ಶನ" ಎಂದಿದ್ದಾರೆ.
"ಬಿಜೆಪಿ ಕಳೆದ ಆರು ವರ್ಷಗಳಿಂದ ಅಧಿಕಾರದಲ್ಲಿದೆ. ಹಣಕಾಸು ಸಂಸ್ಥೆಗಳನ್ನು ನಿಯಂತ್ರಿಸುವ ಹಾಗೂ ನಿರ್ವಹಿಸುವ ಅವರ ಸಾಮರ್ಥ್ಯವನ್ನು ಯೆಸ್ ಬ್ಯಾಂಕ್ ಬಿಕ್ಕಟ್ಟು ಬಹಿರಂಗಗೊಳಿಸಿದೆ. ಮದಲಿಗೆ ಅದು ಪಿಎಂಸಿ ಬ್ಯಾಂಕ್ ಆಗಿತ್ತು. ಈಗ ಯೆಸ್ ಬ್ಯಾಂಕ್. ಸರ್ಕಾರಕ್ಕೆ ಯಾವುದೇ ಇಲ್ಲವೇ? ತನ್ನ ಜವಾಬ್ದಾರಿಯಿಂದ ಸರ್ಕಾರ ತಪ್ಪಿಸಿಕೊಳ್ಳಲು ಸಾಧ್ಯವೇ? ಮತ್ತೊಂದು ಬ್ಯಾಂಕ್ ಇದೇ ಸಾಲಿನಲ್ಲಿದೆಯೇ?" ಎಂದು ತಿಳಿಸಿದ್ದಾರೆ.