ಬೆಂಗಳೂರು, ಸೆ. 08 (DaijiworldNews/AA): ಇಡೀ ಕ್ಯಾಬಿನೆಟ್ ಆಂಬುಲೆನ್ಸ್ ಖಾಸಗೀಕರಣಕ್ಕೆ ಒಪ್ಪಿದೆ ಎಂದು ಆರೋಗ್ಯ ಸಚಿವ ಯುಟಿ ಖಾದರ್ ತಿಳಿಸಿದ್ದಾರೆ.

ಈ ಕುರಿತು ಸ್ವತಃ ಮಾಹಿತಿ ನೀಡಿರುವ ಸಚಿವರು, "108 ಆಂಬುಲೆನ್ಸ್ ನಿರ್ವಹಣೆಗೆ ಹೊಸ ಪಾಲಿಸಿ ಮಾಡೋದಕ್ಕೆ ಸರ್ಕಾರ ಮುಂದಾಗಿದೆ. ಹೊಸ ಪಾಲಿಸಿಯಲ್ಲಿ 108 ಆಂಬುಲೆನ್ಸ್ ಅನ್ನು ಖಾಸಗಿ ಅವರಿಗೆ ನೀಡೋದಕ್ಕೆ ನಿರ್ಧಾರ ಮಾಡಲಾಗಿದೆ. ಕರ್ನಾಟಕ ಸರ್ಕಾರದ ಇಡೀ ಕ್ಯಾಬಿನೆಟ್ ಖಾಸಗೀಕರಣಕ್ಕೆ ಒಪ್ಪಿದೆ. ಸಿಎಂ ಕೂಡ ಖಾಸಗಿಕರಣಕ್ಕೆ ಒಪ್ಪಿದ್ದಾರೆ" ಎಂದು ಹೇಳಿದರು.
"ಕಳೆದ ಬಾರಿ ಆರೋಗ್ಯ ಸಚಿವರಾಗಿದ್ದ ದಿನೇಶ್ ಗುಂಡೂರಾವ್ ಜಿಕೆವಿಕೆ ಸಂಸ್ಥೆಗೆ ಕೊಡಲ್ಲ ಸರ್ಕಾರವೇ 108 ಅಂಬುಲೆನ್ಸ್ ನಿರ್ವಹಣೆ ಮಾಡುತ್ತೇವೆ ಅಂದಿದ್ದರು. ಈಗ ಖಾದರ್ ನೂತನ ಆರೋಗ್ಯ ಸಚಿವರು ಆದ ಮೇಲೆ ಟೆಂಡರ್ ನೀಡೋದಕ್ಕೆ ಮುಂದಾಗಿದ್ದಾರೆ. ಆಂಬುಲೆನ್ಸ್ ಚಾಲಕರಿಗೆ ಟೈಂ ಲೈನ್ ನೀಡಲಿದ್ದು, ಗ್ರಾಮೀಣ ಭಾಗದಲ್ಲಿ 10 ನಿಮಿಷಕ್ಕೆ ಆಸ್ಪತ್ರೆ ತಲುಪಬೇಕು. ನಗರ ಪ್ರದೇಶದಲ್ಲಿ 15 ರಿಂದ 20 ನಿಮಿಷದಲ್ಲಿ ಆಸ್ಪತ್ರೆ ತಲುಪಬೇಕು. ಸಮಯ ಮೀರಿದ್ರೆ ಟೆಂಡರ್ ಪಡೆದ ಕಂಪನಿಗೆ 5 ರಿಂದ 10,000 ದಂಡ ವಿಧಿಸಲಾಗುತ್ತದೆ" ಎಂದು ಮಾಹಿತಿ ನೀಡಿದ್ದಾರೆ.
"ಪ್ರತಿಭಟನೆ ಮಾಡಿ ರೋಗಿಗಳಿಗೆ ತೊಂದರೆ ಆದರೆ ಕ್ರಮ ಆಗುತ್ತೆ. 108 ಸಿಬ್ಬಂದಿಗೂ ನಮಗೂ ಸಂಬAಧ ಇಲ್ಲ. ಕಂಪನಿಗೆ ಸಂಬಂಧಪಟ್ಟಿದ್ದು ಕಂಪನಿ ಬಳಿ ಬಗೆಹರಿಸಿಕೊಳ್ಳಿ. ರೋಗಿಗೆ ಸಮಸ್ಯೆಯಾದರೆ ಎಲ್ಲಾ ಸಿಬ್ಬಂದಿ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಎಚ್ಚರಿಸಿದ್ದಾರೆ.