ಬೆಂಗಳೂರು, ಆ. 29 (DaijiworldNews/AK): ದರ ಏರಿಕೆಯಿಂದ ಜನಸಾಮಾನ್ಯರಿಗೆ ಸಕ್ಕರೆ , ಬೆಲ್ಲ ಕಹಿಯಾಗಿದೆ. ಮತ್ತೆ ದರ ಏರಿಕೆ ಆಗಿದೆ . ಬೆಲ್ಲದ ದರ ಕೆಜಿಗೆ ಏಕಾಏಕಿ 12 ರೂಪಾಯಿ ಹೆಚ್ಚಳವಾಗಿದೆ. ಕಳೆದ ಮೂರ್ನಾಲ್ಕು ದಿನದ ಹಿಂದೆ 66 ರೂಪಾಯಿ ಇದ್ದ ಕೆ.ಜಿ ಸಕ್ಕರೆ, ಇಂದು 70 ರೂ.ಗೆ ಏರಿಕೆಯಾಗಿದೆ.

ಬೆಲ್ಲ ನಾಲ್ಕು ದಿನದ ಹಿಂದೆ ಕೆ.ಜಿಗೆ 68 ರೂ. ಇತ್ತು. ಇಂದು 12 ರೂ. ಏರಿಕೆ ಕಂಡಿದ್ದು, ಕೆಜಿಗೆ 80 ರೂ. ತಲುಪಿದೆ. ಸದ್ಯ ಎರಡರ ದರ ಏರಿಕೆ ಜನಸಾಮಾನ್ಯರ ಮೇಲೆ ಗಂಭೀರ ಪರಿಣಾಮ ಬೀರಲಿದೆ.