ಪಾಟ್ನಾ, ಆ. 25 (DaijiworldNews/AK): ಸಾಧನೆ ಮಾಡುವವರೆಗೆ ಹಿಂದೆ ತಿರುಗಿ ನೋಡುವುದಿಲ್ಲ ಎಂದು ನಿರ್ಧಾರ ಮಾಡಿದ ವ್ಯಕ್ತಿಗಳಿಗೆ ಅದೇನೇ ಸಮಸ್ಯೆ, ಸವಾಲು ಎದುರಾದರು ಸಹ ಅವರು ಕುಗ್ಗುವುದಿಲ್ಲ ಎನ್ನುವುದಕ್ಕೆ ರಾಜೇಶ್ ಕುಮಾರ್ ಸಿಂಗ್ ಅವರ ಸಕ್ಸಸ್ ಜರ್ನಿ ಇಲ್ಲಿದೆ.

ಪಾಟ್ನಾದ ಅನಿಶಾಬಾದ್ ರಾಜೇಶ್ ಸರ್ ರವರ ಹುಟ್ಟೂರು. 2007 ನೇ ಬ್ಯಾಚ್ನಲ್ಲಿ ಯುಪಿಎಸ್ಸಿ ಸಿಎಸ್ಇ ಪಾಸ್ ಮಾಡಿದ ಅವರು 2010 ರಲ್ಲಿ ಪೋಸ್ಟಿಂಗ್ ಅನ್ನು ಅಸ್ಸಾಂ ನ ಮೇಘಾಲಯ ಕೇಡರ್ನಲ್ಲಿ ಐಎಎಸ್ ಅಧಿಕಾರಿಯಾಗಿ ಪಡೆದರು.
ರಾಜೇಶ್ ಸರ್ 2007ನೇ ಸಾಲಿನ ಸಿಎಸ್ಇ ಪರೀಕ್ಷೆಯಲ್ಲಿ ವಿಶೇಷ ಚೇತನರ ಕೆಟಗರಿಯಲ್ಲಿ ಮೂರನೇ ರ್ಯಾಂಕ್ನೊಂದಿಗೆ ಯುಪಿಎಸ್ಸಿ ಪಾಸ್ ಮಾಡಿದರು. ಲಕ್ಷಾಂತರ ಯುವ ಆಕಾಂಕ್ಷಿಗಳಿಗೆ ಪ್ರೇರಣೆ ಆದವರು. ಆದರೆ ಇವರ ಸಕ್ಸಸ್ ನಂತರ ಎದುರಾದ ಸಮಸ್ಯೆ ಒಂದು ರೀತಿಯಲ್ಲಿ ಆಶ್ಚರ್ಯವನ್ನು ಉಂಟು ಮಾಡುತ್ತದೆ. ರಾಜೇಶ್ ಸರ್ ಶೇಕಡ.90 ರಷ್ಟು ಅಂಧತ್ವ ಹೊಂದಿದ್ದಾರೆ ಎಂದು ಅವರಿಗೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಇವರಿಗೆ ಪೋಸ್ಟಿಂಗ್ ನೀಡಿರಲಿಲ್ಲವಂತೆ. ಆದರೆ ಸುಪ್ರೀಂ ಕೋರ್ಟ್ ಇವರ ಪರ ಆದೇಶ ಹೊರಡಿಸಿದ ನಂತರದಲ್ಲಿ 2010 ರಲ್ಲಿ ಇವರಿಗೆ ಪೋಸ್ಟಿಂಗ್ ನೀಡಲಾಯಿತು.
ರಾಜೇಶ್ ಸರ್ ತಮ್ಮ 6ನೇ ವಯಸ್ಸಿಗೆ ಕ್ರಿಕೆಟ್ ಆಡುವಾಗಲೇ ಕಣ್ಣಿನ ದೃಷ್ಟಿ ಕಳೆದುಕೊಂಡವರು. ರಾಜೇಶ್ ಸರ್ ಕ್ರಿಕೆಟ್ ಆಡುವಾಗಲೇ ದೃಷ್ಟಿ ಕಳೆದುಕೊಂಡರೂ ಸಹ ಅದೇ ಕ್ರಿಕೆಟ್ ಆಟದ ಮೂಲಕ 'Blind Cricket World Cup' ಕ್ರೀಡಾ ಕೂಟದಲ್ಲಿ ಮೂರು ಬಾರಿ ಭಾರತವನ್ನು 1998, 2002, 2006 ರಲ್ಲಿ ಪ್ರತಿನಿಧಿಸಿದವರು ಎಂಬುದು ಹೆಗ್ಗಳಿಕೆ ಆಗಿದೆ.
ರಾಜೇಶ್ ಡೆಹರಾಡೂನ್ನ ಮಾಡೆಲ್ ಸ್ಕೂಲ್ ನಲ್ಲಿ ಶಾಲಾ ಶಿಕ್ಷಣ ಪಡೆದರು. 2010 ರಲ್ಲಿ ಇವರ ಯುಪಿಎಸ್ಸಿ ಸಾಧನೆಗೆ ಸಿಎನ್ಎನ್ ಐಬಿಎನ್ನ ಸಿಟಿಜೆನ್ ಜರ್ನಲಿಸ್ಟ್ ಅವಾರ್ಡ್ಗೆ ನಾಮನಿರ್ದೇಶನ ಸಹ ಪಡೆದಿದ್ದರು.
180 ಪುಟಗಳ ಪುಸ್ತಕ ಬರೆದಿದ್ದಾರೆ : 'Putting eye in IAS' ಎಂಬ ಹೆಸರಿನ ಪುಸ್ತಕವನ್ನು ಬರೆದಿದ್ದು, ಇದು ಒಂದು ಸಣ್ಣ ಪಟ್ಟಣದ ಅಂಧತ್ವ ಹೊಂದಿದ ಹುಡುಗ ದೇಶದ ಉನ್ನತ ಹುದ್ದೆ ಇಂಡಿಯನ್ ಸಿವಿಲ್ ಸರ್ವೀಸ್ಗೆ ಆಯ್ಕೆ ಆಗುವ ಜರ್ನಿ ಕುರಿತದ್ದಾಗಿದೆ. ಈ ಪುಸ್ತಕವನ್ನು 2016 ರಲ್ಲಿ ಬಿಡುಗಡೆ ಮಾಡಲಾಗಿದೆ.
ರಾಜೇಶ್ ಕುಮಾರ್ ಸರ್ ರವರ ಈ ಸಕ್ಸಸ್ ಜರ್ನಿ ಖಂಡಿತ ಯುವ ಯುಪಿಎಸ್ಸಿ ಆಕಾಂಕ್ಷಿಗಳಿಗೆ ಪ್ರೇರಣೆಯಾಗಿದೆ.