ಬೆಂಗಳೂರು, ಆ. 24 (DaijiworldNews/AK): ಕೆಪಿಎಸ್ಸಿ ಪಶು ವೈದ್ಯರ ನೇಮಕಾತಿಯಲ್ಲಿ ಹಗರಣ ನಡೆದ ಹಿನ್ನೆಲೆ ಎಕ್ಸಾಂ ಕಂಟ್ರೋಲರ್ ಆಗಿದ್ದ, IAS ಅಧಿಕಾರಿ ಜ್ಞಾನೇಂದ್ರಕುಮಾರ್ ಅವರ ಉತ್ತರ ಪ್ರದೇಶದ ಲಖನೌ ಬಳಿ ಹಳ್ಳಿಯಲ್ಲಿರುವ ಮನೆ ಮೇಲೆಯೂ ಇಡಿ ದಾಳಿ ನಡೆಸಿದೆ.

ಮನೆಯಿಂದಲೂ ಜ್ಞಾನೇಂದ್ರಕುಮಾರ್ ಪರಾರಿಯಾಗಿದ್ದು, ವೃದ್ಧ ತಂದೆ ಮತ್ತು ಕೇರ್ಟೇಕರ್ ಹೊರತುಪಡಿಸಿ ಬೇರೆ ಯಾರೂ ಮನೆಯಲ್ಲಿರಲಿಲ್ಲ. ಜ್ಞಾನೇಂದ್ರ ಕುಮಾರ್ ಕುಟುಂಬ ಸದಸ್ಯರು ಕೂಡ ಸಂಪರ್ಕಕ್ಕೆ ಸಿಗ್ತಿಲ್ಲ ಎನ್ನಲಾಗಿದೆ. ಈ ನಡುವೆ ಪಶು ವೈದ್ಯರ ನೇಮಕಾತಿ ಹಗರಣದ ತನಿಖೆಯನ್ನು ಇಡಿ ಮುಂದುವರಿಸಿದೆ.
IAS ಅಧಿಕಾರಿ ಜ್ಞಾನೇಂದ್ರಕುಮಾರ್ ಅವರ ಬೆಂಗಳೂರಿನ ಜಯಮಹಲ್ ರಸ್ತೆಯಲ್ಲಿರುವ ನಿವಾಸದ ಮೇಲೆಯೂ ಇಡಿ ದಾಳಿ ನಡೆಸಿತ್ತು. ಆದ್ರೆ, ಮನೆಗೆ ಬೀಗ ಹಾಕಿರುವುದರಿಂದ ಕೀ ಮೇಕರ್ನನ್ನು ಕರೆಯಿಸಿ ಬಾಗಿಲು ಓಪನ್ ಮಾಡಿಸಿ ಪರಿಶೀಲನೆ ನಡೆಸಿದ್ದರು. 2016ನೇ ಬ್ಯಾಚ್ನ IAS ಅಧಿಕಾರಿ ಜ್ಞಾನೇಂದ್ರ ಕುಮಾರ್, 10 ವರ್ಷಗಳಲ್ಲಿ ಆಯಕಟ್ಟಿನ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದು, ಮಾರ್ಚ್ವರೆಗೂ KPSCಯಲ್ಲಿ ಎಕ್ಸಾಂ ಕಂಟ್ರೋಲರ್ ಆಗಿದ್ದರು. ಅಲ್ಲದೇ ಪಶುವೈದ್ಯಾಧಿಕಾರಿ ಮತ್ತು KAS ಪರೀಕ್ಷಾ ಮೇಲ್ವಿಚಾರಕರಾಗಿದ್ದರು.
KPSCಯಲ್ಲಿ ಪರೀಕ್ಷಾ ನಿಯಂತ್ರಕರಾಗಿ ಕೆಲಸ ಮಾಡಿದ್ದ ಜ್ಞಾನೇಂದ್ರ ಕುಮಾರ್ ಇಡಿ ದಾಳಿ ಸುಳಿವಿನ ಮೇಲೆ ಪರಾರಿಯಾಗಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗಿದೆ.