ಬೆಂಗಳೂರು,ಆ. 17 (DaijiworldNews/AK): ಬೆಂಗಳೂರಿನ ತುಳುವರೆಂಕುಲು ಅಂಗವಾಗಿ ದಕ್ಷಿಣ ಕನ್ನಡ ಮತ್ತು ಕರಾವಳಿ ಜಿಲ್ಲಾ ಸಂಘಗಳ ಒಕ್ಕೂಟ (ರಿ), ಮೈಸೂರು ಇದರ ಅಧ್ಯಕ್ಷರಾದ ಗ್ರೇಸಿಯನ್ ರೋಡ್ರಿಗಸ್ ಅವರು ಬೆಂಗಳೂರಿನ ಟೌನ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.




ಈ ಸಂದರ್ಭದಲ್ಲಿ ಬೆಂಗಳೂರಿನ ಸುಮಾರು 40ಕ್ಕೂ ಹೆಚ್ಚು ತುಳು ಭಾಷಿಕರ ಸಂಘಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ಅವರುಗಳೊಂದಿಗೆ ನಡೆದ ಸಂವಾದದಲ್ಲಿ, ಬೆಂಗಳೂರಿನಲ್ಲಿಯೂ ತುಳು ಭಾಷಿಕರ ಒಕ್ಕೂಟವನ್ನು ಸ್ಥಾಪಿಸುವ ಕುರಿತು ಚರ್ಚೆ ನಡೆಯಿತು.
ಈ ವೇಳೆ ನಮ್ಮ ಅಧ್ಯಕ್ಷರು ಒಕ್ಕೂಟದ ಉದ್ದೇಶ, ಕಾರ್ಯವೈಖರಿ ಹಾಗೂ ಸಂಘಗಳಿಗೆ ಒಕ್ಕೂಟದಿಂದ ದೊರೆಯುವ ಸಹಕಾರ ಮತ್ತು ಪ್ರಯೋಜನಗಳ ಕುರಿತು ಸಮಗ್ರ ಮಾಹಿತಿ ಹಾಗೂ ಸಲಹೆ-ಸೂಚನೆಗಳನ್ನು ನೀಡಿದರು.
ಕಾರ್ಯಕ್ರಮದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇದು ನಮ್ಮ ದಕ್ಷಿಣ ಕನ್ನಡ ಮತ್ತು ಕರಾವಳಿ ಜಿಲ್ಲಾ ಸಂಘಗಳ ಒಕ್ಕೂಟ (ರಿ), ಮೈಸೂರುಗೆ ಹೆಮ್ಮೆಯ ಹಾಗೂ ಸಂತಸದ ವಿಷಯವಾಗಿದೆ ಎಂದರು.
ಈ ಸಂದರ್ಭದಲ್ಲಿ ನಮ್ಮ ಒಕ್ಕೂಟದ ರವೀಂದ್ರ ಗೋರೆ ಹಾಗೂ ಪಿ. ಜೆ. ಲೋಬೋ ಅವರು ಸಹ ಉಪಸ್ಥಿತರಿದ್ದರು