ನೆಲಮಂಗಲ, ಜು. 25 (DaijiworldNews/TA): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬೈರಸಂದ್ರ ಗ್ರಾಮದಲ್ಲಿ 8ನೇ ಶತಮಾನದ ಗಂಗರ ಕಾಲಕ್ಕೆ ಸೇರಿದ ಅಪರೂಪದ ಶಿಲಾಶಾಸನ ಹಾಗೂ ವೀರಗಲ್ಲು ಪತ್ತೆಯಾಗಿದ್ದು, ಇದು ಕರ್ನಾಟಕದ ಪ್ರಾಚೀನ ಇತಿಹಾಸ ಅಧ್ಯಯನಕ್ಕೆ ಮಹತ್ವದ ಸೇರ್ಪಡೆಯಾಗಿದೆ. ಬೈರಸಂದ್ರ ಗ್ರಾಮದ ಸ್ಥಳೀಯ ನಿವಾಸಿ ರಂಗಸ್ವಾಮಯ್ಯ ಅವರ ಜಮೀನಿನಲ್ಲಿ ಕೃಷಿ ಕೆಲಸ ನಡೆಯುತ್ತಿದ್ದ ವೇಳೆ ಈ ಐತಿಹಾಸಿಕ ಪಳೆಯುಳಿಕೆ ಬೆಳಕಿಗೆ ಬಂದಿದೆ. ವಿಷಯ ತಿಳಿದ ಬಳಿಕ ಖ್ಯಾತ ಇತಿಹಾಸ ತಜ್ಞ ಬಾಲಸುಬ್ರಹ್ಮಣ್ಯ ರಾವ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇದು ಗಂಗರ ಕಾಲದ ಅಮೂಲ್ಯ ಶಿಲಾಶಾಸನ ಹಾಗೂ ವೀರಗಲ್ಲು ಎಂಬುದನ್ನು ದೃಢಪಡಿಸಿದ್ದಾರೆ.

ಪತ್ತೆಯಾಗಿರುವ ವೀರಗಲ್ಲಿನಲ್ಲಿ ಗಂಗರ ಕಾಲದ ಹಳೆಯ ಕನ್ನಡ ಲಿಪಿಯಲ್ಲಿ ಶಾಸನ ಕೆತ್ತಲಾಗಿದ್ದು, ಆ ಕಾಲದ ಆಡಳಿತ ವ್ಯವಸ್ಥೆ, ಸಮಾಜ ಹಾಗೂ ವೀರರ ಬದುಕಿನ ಕುರಿತು ಮಹತ್ವದ ಮಾಹಿತಿಯನ್ನು ದಾಖಲಿಸಲಾಗಿದೆ. ಇತಿಹಾಸದ ಪ್ರಕಾರ, 8ನೇ ಶತಮಾನದಲ್ಲಿ ‘ಮಣ್ಣೆ’ (ಮಾನ್ಯಪುರ) ಗಂಗರ ಪ್ರಮುಖ ರಾಜಧಾನಿಯಾಗಿತ್ತು. ಆ ಸಂದರ್ಭದಲ್ಲಿ ತ್ತಂಣೀಯರಟ್ಟಮ್ಮರೊಡೆಯನ ಪುತ್ರನಾದ ಸಿವಮರೆನಾದಿ ಎಂಬುವವರು ಮಣ್ಣೆನಾಡಿನ ನಾಡಗೌಡ ಮಾರಮ್ಮನ ಸೇವಕರಾಗಿದ್ದರು. ಗ್ರಾಮಕ್ಕೆ ದಾಳಿ ಮಾಡಿದ ಕ್ರೂರ ಹುಲಿಯಿಂದ ಜನರನ್ನು ರಕ್ಷಿಸಲು ಸಿವಮರೆನಾದಿ ಪ್ರಾಣದ ಹಂಗು ತೊರೆದು ಹುಲಿಯೊಂದಿಗೆ ವೀರಾವೇಶದಿಂದ ಹೋರಾಡಿ ಕೊನೆಗೆ ವೀರಮರಣ ಹೊಂದಿದ್ದನೆಂಬುದನ್ನು ಈ ಶಾಸನ ವಿವರಿಸುತ್ತದೆ.
ಈ ವೀರಗಲ್ಲಿನ ವಿಶೇಷವೆಂದರೆ, ಕೇವಲ ಶಾಸನ ಮಾತ್ರವಲ್ಲದೆ ಅದ್ಭುತ ಶಿಲ್ಪಕಲೆಯೂ ಇಲ್ಲಿ ಮೂಡಿಬಂದಿದೆ. ವೀರನು ಒಂದು ಕೈಯಲ್ಲಿ ಹುಲಿಯನ್ನು ಬಿಗಿಯಾಗಿ ಹಿಡಿದು, ಮತ್ತೊಂದು ಕೈಯಲ್ಲಿ ಕತ್ತಿ ಬೀಸುತ್ತಾ ಹೋರಾಡುತ್ತಿರುವ ರೋಚಕ ದೃಶ್ಯವನ್ನು ಶಿಲ್ಪದಲ್ಲಿ ಜೀವಂತವಾಗಿ ಕೆತ್ತಲಾಗಿದೆ. ಅಲ್ಲದೆ, ದೇಶದ ರಕ್ಷಣೆಗೆ ಪ್ರಾಣ ತ್ಯಾಗ ಮಾಡಿದ ವೀರನ ಆತ್ಮವನ್ನು ದೇವಲೋಕದ ಅಪ್ಸರೆಯರು ಗೌರವದಿಂದ ಕರೆದೊಯ್ಯುತ್ತಿರುವ ದೃಶ್ಯವೂ ವೀರಗಲ್ಲಿನಲ್ಲಿ ಅಚ್ಚಳಿಯದೆ ಮೂಡಿಬಂದಿದೆ.
ಇತಿಹಾಸ ತಜ್ಞರ ಪ್ರಕಾರ, ಈ ಶಿಲಾಶಾಸನವು ಗಂಗರ ಕಾಲದ ಆಡಳಿತ ವ್ಯವಸ್ಥೆ, ಕನ್ನಡ ಭಾಷೆಯ ಪ್ರಾಚೀನ ಬೆಳವಣಿಗೆ, ಶಿಲ್ಪಕಲೆ ಹಾಗೂ ಸಮಾಜದಲ್ಲಿದ್ದ ವೀರ ಸಂಸ್ಕೃತಿಯ ಬಗ್ಗೆ ಅಮೂಲ್ಯ ಮಾಹಿತಿಯನ್ನು ನೀಡುವ ದಾಖಲೆವಾಗಿದೆ. ಈ ಅಪರೂಪದ ಪತ್ತೆಯಿಂದ ನೆಲಮಂಗಲ ಪ್ರದೇಶದ ಐತಿಹಾಸಿಕ ಮಹತ್ವ ಮತ್ತಷ್ಟು ಬೆಳಕಿಗೆ ಬಂದಿದ್ದು, ಪುರಾತತ್ವ ಸಂಶೋಧನೆಗೆ ಹೊಸ ಆಯಾಮ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬೈರಸಂದ್ರ ಗ್ರಾಮದಲ್ಲಿ 8ನೇ ಶತಮಾನದ ಗಂಗರ ಕಾಲಕ್ಕೆ ಸೇರಿದ ಅಪರೂಪದ ಶಿಲಾಶಾಸನ ಹಾಗೂ ವೀರಗಲ್ಲು ಪತ್ತೆಯಾಗಿದ್ದು, ಇದು ಕರ್ನಾಟಕದ ಪ್ರಾಚೀನ ಇತಿಹಾಸ ಅಧ್ಯಯನಕ್ಕೆ ಮಹತ್ವದ ಸೇರ್ಪಡೆಯಾಗಿದೆ.
ಬೈರಸಂದ್ರ ಗ್ರಾಮದ ಸ್ಥಳೀಯ ನಿವಾಸಿ ರಂಗಸ್ವಾಮಯ್ಯ ಅವರ ಜಮೀನಿನಲ್ಲಿ ಕೃಷಿ ಕೆಲಸ ನಡೆಯುತ್ತಿದ್ದ ವೇಳೆ ಈ ಐತಿಹಾಸಿಕ ಪಳೆಯುಳಿಕೆ ಬೆಳಕಿಗೆ ಬಂದಿದೆ. ವಿಷಯ ತಿಳಿದ ಬಳಿಕ ಖ್ಯಾತ ಇತಿಹಾಸ ತಜ್ಞ ಬಾಲಸುಬ್ರಹ್ಮಣ್ಯ ರಾವ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇದು ಗಂಗರ ಕಾಲದ ಅಮೂಲ್ಯ ಶಿಲಾಶಾಸನ ಹಾಗೂ ವೀರಗಲ್ಲು ಎಂಬುದನ್ನು ದೃಢಪಡಿಸಿದ್ದಾರೆ. ಪತ್ತೆಯಾಗಿರುವ ವೀರಗಲ್ಲಿನಲ್ಲಿ ಗಂಗರ ಕಾಲದ ಹಳೆಯ ಕನ್ನಡ ಲಿಪಿಯಲ್ಲಿ ಶಾಸನ ಕೆತ್ತಲಾಗಿದ್ದು, ಆ ಕಾಲದ ಆಡಳಿತ ವ್ಯವಸ್ಥೆ, ಸಮಾಜ ಹಾಗೂ ವೀರರ ಬದುಕಿನ ಕುರಿತು ಮಹತ್ವದ ಮಾಹಿತಿಯನ್ನು ದಾಖಲಿಸಲಾಗಿದೆ.
ಇತಿಹಾಸದ ಪ್ರಕಾರ, 8ನೇ ಶತಮಾನದಲ್ಲಿ ‘ಮಣ್ಣೆ’ (ಮಾನ್ಯಪುರ) ಗಂಗರ ಪ್ರಮುಖ ರಾಜಧಾನಿಯಾಗಿತ್ತು. ಆ ಸಂದರ್ಭದಲ್ಲಿ ತ್ತಂಣೀಯರಟ್ಟಮ್ಮರೊಡೆಯನ ಪುತ್ರನಾದ ಸಿವಮರೆನಾದಿ ಎಂಬುವವರು ಮಣ್ಣೆನಾಡಿನ ನಾಡಗೌಡ ಮಾರಮ್ಮನ ಸೇವಕರಾಗಿದ್ದರು. ಗ್ರಾಮಕ್ಕೆ ದಾಳಿ ಮಾಡಿದ ಕ್ರೂರ ಹುಲಿಯಿಂದ ಜನರನ್ನು ರಕ್ಷಿಸಲು ಸಿವಮರೆನಾದಿ ಪ್ರಾಣದ ಹಂಗು ತೊರೆದು ಹುಲಿಯೊಂದಿಗೆ ವೀರಾವೇಶದಿಂದ ಹೋರಾಡಿ ಕೊನೆಗೆ ವೀರಮರಣ ಹೊಂದಿದ್ದನೆಂಬುದನ್ನು ಈ ಶಾಸನ ವಿವರಿಸುತ್ತದೆ.
ಈ ವೀರಗಲ್ಲಿನ ವಿಶೇಷವೆಂದರೆ, ಕೇವಲ ಶಾಸನ ಮಾತ್ರವಲ್ಲದೆ ಅದ್ಭುತ ಶಿಲ್ಪಕಲೆಯೂ ಇಲ್ಲಿ ಮೂಡಿಬಂದಿದೆ. ವೀರನು ಒಂದು ಕೈಯಲ್ಲಿ ಹುಲಿಯನ್ನು ಬಿಗಿಯಾಗಿ ಹಿಡಿದು, ಮತ್ತೊಂದು ಕೈಯಲ್ಲಿ ಕತ್ತಿ ಬೀಸುತ್ತಾ ಹೋರಾಡುತ್ತಿರುವ ರೋಚಕ ದೃಶ್ಯವನ್ನು ಶಿಲ್ಪದಲ್ಲಿ ಜೀವಂತವಾಗಿ ಕೆತ್ತಲಾಗಿದೆ. ಅಲ್ಲದೆ, ದೇಶದ ರಕ್ಷಣೆಗೆ ಪ್ರಾಣ ತ್ಯಾಗ ಮಾಡಿದ ವೀರನ ಆತ್ಮವನ್ನು ದೇವಲೋಕದ ಅಪ್ಸರೆಯರು ಗೌರವದಿಂದ ಕರೆದೊಯ್ಯುತ್ತಿರುವ ದೃಶ್ಯವೂ ವೀರಗಲ್ಲಿನಲ್ಲಿ ಅಚ್ಚಳಿಯದೆ ಮೂಡಿಬಂದಿದೆ.
ಇತಿಹಾಸ ತಜ್ಞರ ಪ್ರಕಾರ, ಈ ಶಿಲಾಶಾಸನವು ಗಂಗರ ಕಾಲದ ಆಡಳಿತ ವ್ಯವಸ್ಥೆ, ಕನ್ನಡ ಭಾಷೆಯ ಪ್ರಾಚೀನ ಬೆಳವಣಿಗೆ, ಶಿಲ್ಪಕಲೆ ಹಾಗೂ ಸಮಾಜದಲ್ಲಿದ್ದ ವೀರ ಸಂಸ್ಕೃತಿಯ ಬಗ್ಗೆ ಅಮೂಲ್ಯ ಮಾಹಿತಿಯನ್ನು ನೀಡುವ ದಾಖಲೆವಾಗಿದೆ. ಈ ಅಪರೂಪದ ಪತ್ತೆಯಿಂದ ನೆಲಮಂಗಲ ಪ್ರದೇಶದ ಐತಿಹಾಸಿಕ ಮಹತ್ವ ಮತ್ತಷ್ಟು ಬೆಳಕಿಗೆ ಬಂದಿದ್ದು, ಪುರಾತತ್ವ ಸಂಶೋಧನೆಗೆ ಹೊಸ ಆಯಾಮ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.